
ಕತಾರ್ (QATAR) ಭಾರತೀಯ ಸಾಂಸ್ಕೃತಿಕ ಕೇಂದ್ರದಿಂದ ಸಂಸದ ಬಿ.ವೈ.ರಾಘವೇಂದ್ರರಿಗೆ ಕೃತಜ್ಞತೆ ಸಲ್ಲಿಕೆ
ನವದೆಹಲಿ: ಕತಾರಿನ (QATAR) ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಸುಬ್ರಮಣ್ಯ ಹೆಬ್ಬಾಗಿಲು ಅವರು ತಮ್ಮ ವಾರ್ಷಿಕ ರಜೆ ಶಿವಮೊಗ್ಗ ಜಿಲ್ಲೆಯ ಲೋಕಸಭಾ ಸದಸ್ಯರಾದ ಬಿ ವೈ ರಾಘವೇಂದ್ರ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದರು.
ಐದು ವರ್ಷಗಳ ಹಿಂದೆ ಕರೊನಾ ಮಹಾಮಾರಿಯ ಕಾಲದಲ್ಲಿ ಬಿ ವೈ ರಾಘವೇಂದ್ರ ಕತಾರಿನಲ್ಲಿದ್ದ ಕನ್ನಡಿಗರಿಗೆ ಮಾತ್ರವಲ್ಲದೆ ಭಾರತೀಯರಿಗೆ ಒಂದೇ ಭಾರತ್ ಮಿಷನ್ ಕಾರ್ಯಕ್ರಮದ ಅಡಿಯಲ್ಲಿ ತಾಯ್ನಾಡಿಗೆ ಹಿಂದಿರುಗಲು ವಿಶೇಷ ವಿಮಾನ ಸೇವೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ತಮ್ಮ ಅತ್ಯಮೂಲ್ಯ ಸಮಯ ಹಾಗೂ ಪರಿಶ್ರಮ ಹಾಕಿದ್ದರು.
ಈ ಹಿನ್ನೆಲೆಯಲ್ಲಿ ಸಂಸದರನ್ನು ದೆಹಲಿಯಲ್ಲಿ ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದರು.
ಮುಂಬರುವ ದಿನಗಳಲ್ಲೂ ಬಿ ವೈ ರಾಘವೇಂದ್ರ ಅವರ ಸಹಾಯ ಹಸ್ತ ಹಾಗೂ ಸಹಕಾರವು ಕತಾರ್ ಜನರ ಮೇಲಿರಲೆಂದು ಸುಬ್ರಮಣ್ಯ ಹೆಬ್ಬಾಗಿಲು ಮನವಿ ಮಾಡಿದರು.