ಮುಂಬಾರು ಸೊಸೈಟಿಗೆ 7.5 ಲಕ್ಷ ನಿವ್ವಳ ಲಾಭ: ಎಸ್.ಕೆ.ಲೇಖನಮೂರ್ತಿ ಅಧ್ಯಕ್ಷತೆಯಲ್ಲಿ ಸರ್ವಸದಸ್ಯರ ಸಭೆ

ಹೊಸನಗರ: ತಾಲೂಕಿನ ಪ್ರತಿಷ್ಠಿತಿ ಮುಂಬಾರು ಕೃಷಿ ಪತ್ತಿನ ಸಹಕಾರ ಸಂಘ 2021-22ನೇ ಸಾಲಿನಲ್ಲಿ ರೂ.7.47 ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ಮುಂಬಾರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಕೆ.ಲೇಖನಮೂರ್ತಿ ಹೇಳಿದರು.

ಮುಂಬಾರು ಸಂಘದ ಆವರಣದಲ್ಲಿ ನಡೆದ ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಉದ್ಘಾಟಿಸಿದ ಅವರು, 846 ಸದಸ್ಯರನ್ನು ಹೊಂದಿದ್ದು ರೂ.6.88ಕೋಟಿ ಶೇರು ಬಂಡವಾಳವನ್ನು ಹೊಂದಿದೆ ಎಂದರು.
ರೈತರಿಗೆ ಸಕಾಲದಲ್ಲಿ ಸಾಲಸೌಲಭ್ಯ ನೀಡಲಾಗಿದ್ದು ರೂ.6 ಕೋಟಿಗೂ ಹೆಚ್ಚು ಸಾಲ ನೀಡಲಾಗಿದೆ. ಶೇ.90ಕ್ಕು ಹೆಚ್ಚು ವಸೂಲಾತಿ ಸಾಧನೆ ಮಾಡಿದೆ ಎಂದರು.

ಮುಂಬಾರು ಸೊಸೈಟಿ ಸರ್ವಸದಸ್ಯರ ಸಭೆಯನ್ನು ಎಸ್.ಕೆ.ಲೇಖನಮೂರ್ತಿ ಉದ್ಘಾಟಿಸಿದರು.

ನೂತನ ಕಟ್ಟಡ ನಿರ್ಮಾಣ:
ಸಂಘದ ಕಾರ್ಯಚಟುವಟಿಕೆಗಳಿಗೆ ಅನುಕೂಲವಾಗುವ ಸಲುವಾಗಿ ನೂತನ ಕಟ್ಟಡ ನಿರ್ಮಾಣಕ್ಕೆ ಗಮನ ನೀಡಲಾಗುತ್ತಿದೆ. ಇದಕ್ಕೆ ರೂ.20 ಲಕ್ಷ ವೆಚ್ಚದ ಅಗತ್ಯವಿದೆ. ಅಲ್ಲದೆ ರೈತರಿಗೆ ಒಂದೇ ಸೂರಿನಡಿ ಗೊಬ್ಬರ, ಕೃಷಿ ಉತ್ಪನ್ನಗಳು, ಸಲಕರಣೆಗಳು ಸುಲಭದರದಲ್ಲಿ ಸಿಗುವಂತೆ ಮಾಡುವ ಆಲೋಚನೆಯಿದೆ ಎಂದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಬ್ರಹ್ಮಣ್ಯ ಸಭೆಯಲ್ಲಿ ಲೆಕ್ಕಪತ್ರ ಮಂಡಿಸಿ ಅನುಮೋದನೆ ಪಡೆದರು.
ಉಪಾಧ್ಯಕ್ಷ ರಾಜಮೂರ್ತಿ, ಸದಸ್ಯರಾದ ಚೂಡಾಮಣಿ, ನಾಗರಾಜ ಗೌಡ, ಎಂ.ಪಿ.ಲೋಕನಾಯ್ಕ್, ಸುರೇಶ್, ಕೊಲ್ಲೂರಪ್ಪ, ಯೋಗೇಂದ್ರ, ಸುಶೀಲಮ್ಮ, ವಿಮಲಾ ಗಂಗಾಧರ್ ಉಪಸ್ಥಿತರಿದ್ದರು.

Exit mobile version