Homeಕ್ರೈಂತಾಲ್ಲೂಕುತೀರ್ಥಹಳ್ಳಿಪ್ರಮುಖ ಸುದ್ದಿಭದ್ರಾವತಿ

ನಗರ ಶ್ರೀ ಗುಜರಿಪೇಟೆ ವೆಂಕಟರಮಣ ದೇಗುಲದಲ್ಲಿ ತಾಮ್ರದ ಪಾತ್ರೆ ಕಳ್ಳತನ | ಪಾತ್ರೆ ಹಿಡಿದು ಕಾಂಪೌಂಡ್ ಹಾರಿ ಹೋಗುತ್ತಿರುವ ದೃಶ್ಯ ಸೆರೆ | ಈ ಹಿಂದೆ ಕೂಡ ರೂ.40 ಸಾವಿರ ಮೌಲ್ಯದ ವಸ್ತು ಕಳ್ಳತನ | ಆದರೆ ಯಾವ ವಸ್ತು ಎಂಬುದರ ಬಗ್ಗೆ ಮಾಹಿತಿ ಇಲ್ಲ

ನಗರ ಶ್ರೀ ಗುಜರಿಪೇಟೆ ವೆಂಕಟರಮಣ ದೇಗುಲದಲ್ಲಿ ತಾಮ್ರದ ಪಾತ್ರೆ ಕಳ್ಳತನ | ಪಾತ್ರೆ ಹಿಡಿದು ಕಾಂಪೌಂಡ್ ಹಾರಿ ಹೋಗುತ್ತಿರುವ ದೃಶ್ಯ ಸೆರೆ | ಈ ಹಿಂದೆ ಕೂಡ ರೂ.40 ಸಾವಿರ ಮೌಲ್ಯದ ವಸ್ತು ಕಳ್ಳತನ | ಆದರೆ ಯಾವ ವಸ್ತು ಎಂಬುದರ ಬಗ್ಗೆ ಮಾಹಿತಿ ಇಲ್ಲ

ಹೊಸನಗರ: ತಾಲ್ಲೂಕು ನಗರದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ತಾಮ್ರದ ಅನ್ನದ ಪಾತ್ರೆ ಕಳ್ಳತನವಾಗಿದ್ದು ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಇದೇ ರೀತಿ ಮೂರ್ನಾಲ್ಕು ತಿಂಗಳ‌ ಹಿಂದೆ ರೂ.40 ಸಾವಿರ ಮೌಲ್ಯದ ವಸ್ತುಗಳು ಕಳ್ಳತನವಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ. ಆದರೆ ಕಳ್ಳತನವಾದ ವಸ್ತುಗಳು ಯಾವುದು ಮತ್ತು ಆ ಸಂದರ್ಭದಲ್ಲಿ ನೀಡಿದ ದೂರಿನ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಆದರೆ 16ನೇ ತಾರೀಖಿನಂದು ತಾಮ್ರದ ಪಾತ್ರೆ ಕಳ್ಳತನದ ಸಂಬಂಧವಾಗಿ ಇಬ್ಬರು ಪಾತ್ರೆ ಹಿಂಡಿದು ಕಾಂಪೌಂಡ್ ಹಾರಿ ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ದೂರಿನಲ್ಲಿ ಏನಿದೆ?
ಹೊಸನಗರ ತಾಲ್ಲೂಕು ನಗರದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ದಿನಾಂಕ : 16-01-2026 ರಂದು ತಾಮ್ರದ ಅನ್ನದ ಪಾತ್ರೆ ಕಳ್ಳತನವಾಗಿದ್ದು
ಶ್ರೀ ದೇವಸ್ಥಾನದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದು, ಅದರಲ್ಲಿ ಪರಿಶೀಲಿಸಿದಾಗ ದಿನಾಂಕ : 16-01-2026 ರ ರಾತ್ರಿ 12-00 ಗಂಟೆಯ ಸುಮಾರಿಗೆ ಇಬ್ಬರು ವ್ಯಕ್ತಿಗಳು ಕಾಂಪೌಂಡ್ ಹಾರಿ ಹೋಗಿರುವುದು ಕಂಡುಬರುತ್ತದೆ. ನಾವು ಎಷ್ಟು ಹುಡುಕಾಡಿದರೂ ಕಳ್ಳತನವಾದ ವಸ್ತು ಪತ್ತೆಯಾಗಿರುವುದಿಲ್ಲ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಈಗ್ಗೆ 3-4 ತಿಂಗಳ ಹಿಂದೆಯೂ ಕೂಡಾ ನಮ್ಮ ದೇವಸ್ಥಾನದ ಸುಮಾರು 40,000-00 ರೂಪಾಯಿ ಮೌಲ್ಯದ ವಸ್ತುಗಳು ಕಳ್ಳತನವಾಗಿರುತ್ತದೆ. ಅದರ ನಂತರ ನಮ್ಮ ದೇವಸ್ಥಾನದ ಭದ್ರತೆಯನ್ನು ಕೂಡಾ ಹೆಚ್ಚಿಸಿದ್ದು, ಅಗತ್ಯ ಇದ್ದಲ್ಲಿ ಬೀಗ ಹಾಕುವುದು, ಸೂಕ್ತ ಬಂದೋಬಸ್ತ್ ಮಾಡುವುದು.. ಇತ್ಯಾದಿ ಎಲ್ಲಾ ಭದ್ರತೆಯನ್ನು ಮಾಡಿರುತ್ತೇವೆ. ಆದರೂ ಮೊನ್ನೆ ದಿನ ಮತ್ತೆ ಕಳ್ಳತನವಾಗಿರುತ್ತದೆ.

ಆದುದರಿಂದ ತಾವುಗಳು ಈ ಬಗ್ಗೆ ಪರಿಶೀಲಿಸಿ, ಕಳ್ಳತನವಾದ ದೇವಸ್ಥಾನದ ವಸ್ತುವನ್ನು ಪತ್ತೆ ಮಾಡಿಕೊಟ್ಟು, ಕಳ್ಳತನ ಮಾಡಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಗುಜರಿಪೇಟೆ ಶ್ರೀ ವೆಂಕಟರಮಣ ದೇವಸ್ಥಾನ ಸಮಿತಿ ಅಧ್ಯಕ್ಷ ಎನ್.ಸುರೇಶ ಭಟ್ ವಿನಂತಿಸಿದ್ದಾರೆ.

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

1 of 51

Leave A Reply

Your email address will not be published. Required fields are marked *