
ಹೊಸನಗರ: ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಗೆ ಹೊರತಂದು ಅದಕ್ಕೆ ನೀರೆರೆಯಬೇಕು ಎಂದು ಹೊಸನಗರ ಎಸಿಎಫ್ ಮೋಹನ ಕುಮಾರ್ ಅಭಿಪ್ರಾಯಿಸಿದರು.
ತಾಲೂಕಿನ ಕರಿಮನೆ ಗ್ರಾಪಂ ವ್ಯಾಪ್ತಿಯ ನ್ಯೂಮಳಲಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಗರ ವಲಯ ಅರಣ್ಯ ಇಲಾಖೆ ಹಮ್ಮಿಕೊಂಡಿದ್ದ ಚಿತ್ರಕಲಾ ಸ್ಪರ್ಧೆಗೆ ಅವರು ಚಾಲನೆ ನೀಡಿದರು. ಗ್ರಾಮೀಣ ಶಾಲೆಯ ಮಕ್ಕಳು ಎಂದು ಕೀಳರಿಮೆ ಬೇಡ. ಪ್ರತಿಭೆಗೆ ನಗರ ಹಳ್ಳಿ ಎಂಬ ತಾರತಮ್ಯವಿಲ್ಲ ಎಂದರು.


ಸ್ಪರ್ಧೆಯಲ್ಲಿ 10 ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಕಲಾಕೃತಿ ರಚಿಸಿ ಗಮನ ಸೆಳೆದರು. ಬಹುಮಾನದ ಜೊತೆ ಸಿಹಿ ಹಂಚಿ ಸಂಭ್ರಮಿಸಿಲಾಯಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು.
ನಗರ ವಲಯ ಅರಣ್ಯಾಧಿಕಾರಿ ಬಿ.ಸಂಜಯ್, ಮುಖ್ಯಶಿಕ್ಷಕ ಜಗದೀಶ್, ಅರಣ್ಯ ಸಿಬ್ಬಂದಿಗಳು, ಶಿಕ್ಷಕರು, ಸ್ಥಳೀಯರು ಇದ್ದರು.
