
ನಗರ ಗುಜರಿಪೇಟೆ ದೀಪೋತ್ಸವ ಅಂಗವಾಗಿ ವೆಂಕಟರಮಣ ದೇವರ ಪಲ್ಲಕ್ಕಿ ಉತ್ಸವ : ಉತ್ಸವದಲ್ಲಿ ಪಾಲ್ಗೊಂಡ ಗೌಡ ಸಾರಸ್ವತ ಬ್ರಾಹ್ಮಣ ಸಮಾಜಬಾಂಧವರು
ಹೊಸನಗರ: ಇತಿಹಾಸ ಪ್ರಸಿದ್ಧ ನಗರ ಗುಜರಿಪೇಟೆ ಶ್ರೀ ವೆಂಕಟರಮಣ ಸ್ವಾಮಿಯ ದೀಪೋತ್ಸವ ಅಂಗವಾಗಿ ದೇವರ ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ನೆರವೇರಿತು.
ದೀಪೋತ್ಸವ ಅಂಗವಾಗಿ ಗುರುವಾರ ಬೆಳಿಗ್ಗೆಯಿಂದಲೇ ಗುಜರಿಪೇಟೆ ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಸ್ವಾಮಿಗೆ ವಿವಿಧ ಅರ್ಚನೆ, ಅಲಂಕಾರ, ಮಂಗಳಾರತಿ ಸೇವೆಗಳು ನಡೆದವು. ದೇವಸ್ಥಾನದಿಂದ ಛತ್ರಗದ್ದೆ ಕಟ್ಟೆವರೆಗೆ ಶ್ರೀದೇವರ ಪಲ್ಲಕ್ಕಿ ಉತ್ಸವ ಸಾಗಿತು. ಉತ್ಸವದ ವೇಳೆ ಜಯಘೋಷ, ರಾಜಬೀದಿಯಲ್ಲಿ ಹಣ್ಣುಕಾಯಿ ಸೇವೆ, ಮಹಿಳೆಯರಿಂದ ಭಜನೆ ಕಾರ್ಯಕ್ರಮ ಗಮನಸೆಳೆಯಿತು.


ದೇವಸ್ಥಾನ ಸಮಿತಿಯ ಪ್ರಮುಖರಾದ ನೂಲಿಗ್ಗೇರಿ ಭಾಸ್ಕರ್ ಭಟ್, ಪ್ರತಿವರ್ಷದಂತೆ ಈ ವರ್ಷ ಕೂಡ ದೀಪೋತ್ಸವ ಕೂಡ ನಡೆಸಲಾಗುತ್ತಿದೆ. ಅರ್ಚಕ ತುಕಾರಾಂ ಭಟ್ ನೇತೃತ್ವದಲ್ಲಿ ದೇವರ ಪಲ್ಲಕ್ಕಿ ಉತ್ಸವ, ಪುರೋತ್ಸವ, ಕಾರ್ತಿಕ ದೀಪೋತ್ಸವ, ಕಾರ್ತಿಕ ದೀಪ, ರಾತ್ರಿ ಪೂಜೆ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ ಎಂದರು.
ಉತ್ಸವದಲ್ಲಿ ಸುರೇಶ ಭಟ್ ಚಿಕ್ಕಪೇಟೆ, ಜಯಲಕ್ಷ್ಮೀ ಎಸ್.ರಾವ್, ಅನಂತಮೂರ್ತಿ ಶೆಣೈ, ವಿಠಲಭಟ್, ಸಂಪೇಕಟ್ಟೆ ಶ್ರೀಕಾಂತ್, ಸುಧೀಂದ್ರ ಭಂಡಾರಕರ್, ನಾರಾಯಣ ಕಾಮತ್, ವೆಂಕಟೇಶ ಭಟ್, ರಾಘವೇಂದ್ರ ವಿ.ಕಿಣಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಬಾಂಧವರು ಭಾಗವಹಿಸಿದ್ದರು.
