
ನಗರ ಹೋಬಳಿಯಲ್ಲಿ ಸತತ 5 ಗಂಟೆಯಿಂದ ಸುರಿಯುತ್ತಿರುವ ಮಳೆ | ಮುಳುಗಿದ ಸೇತುವೆ.. ದ್ವೀಪದಂತಾದ ಮನೆ ಗಳು..
ಹೊಸನಗರ: ಮಂಗಳವಾರ ಬೆಳ್ಳಂಬೆಳಿಗ್ಗೆ ಆರಂಭವಾದ ಮಳೆ ಸತತ 5 ಗಂಟೆಯಿಂದ ಸುರಿಯುತ್ತಿದೆ. ಇದರ ಪರಿಣಾಮ ನಗರ ಹೋಬಳಿ ನೆರೆಗೆ ತುತ್ತಾಗಿದೆ.
ಸಂಡೋಡಿಯಲ್ಲಿ ಕಿರು ಸೇತುವೆ ಮುಳುಗಿದರೇ.. ಶಾಸಕ ಜ್ಞಾನೇಂದ್ರ ಆಪ್ತ ಸಹಾಯಕನ ಮನೆ ದ್ವೀಪದಂತಾಗಿದೆ. ಮಳೆಯ ಆರ್ಭಟ ಎಷ್ಟಿದೆ ಎಂದರೆ ಯಾರು ಕೂಡ ಮನೆಯಿಂದ ಹೊರಬರದಂತೆ ವಾತಾವರಣ ನಿರ್ಮಾಣ ಆಗಿದೆ.


