ಬಿದನೂರಿನಲ್ಲಿ ಕಟೀಲು ಶ್ರೀಗಣಪತಿಯ ಭವ್ಯ ಮೆರವಣಿಗೆ : ಶ್ರೀಧರಪುರ ಮುಂಡಿಗೆಗದ್ದೆಯಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಹರಕೆ ಬಯಲಾಟ


ಹೊಸನಗರ: ನಗರ ಶ್ರೀಧರಪುರದ ಮುಂಡಿಗೆಗದ್ದೆಯಲ್ಲಿ ಕಟೀಲು ಶ್ರೀದುರ್ಗಾಪರಮೇಶ್ವರಿಯ ಹರಕೆ ಯಕ್ಷಗಾನ ಬಯಲಾಟದ ಅಂಗವಾಗಿ ಬಿದನೂರು ಶ್ರೀಪಂಚಮುಖಿ ದೇಗುಲದಿಂದ ಶ್ರೀ ಗಣಪತಿಯ ಮೆರವಣಿಗೆ ವೈಭವದಿಂದ ನೆರವೇರಿತು.

ಶ್ರೀ ಪಂಚಮುಖಿ ದೇಗುಲದ ಆವರದಲ್ಲಿ ವಿಘ್ನ ವಿನಾಯಕನಿಗೆ ಪೂಜೆ ನೆರವೇರಿಸಿದ ಬಳಿಕ ಪೂರ್ಣಕುಂಭ ಸ್ವಾಗತದೊಂದಿಗೆ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಕಟೀಲು ಮೇಳದ ವ್ಯವಸ್ಥಾಪಕ ಕೃಷ್ಣಮೂರ್ತಿ ಕೈರಂಗಳ್, ಪ್ರಧಾನ ಅರ್ಚಕ ಶ್ರೀಕಾಂತ ಭಟ್, ಅರ್ಚಕ ಉಮಾಮಹೇಶ್ವರ ಭಟ್, ಶನೇಶ್ವರ ದೇವಸ್ಥಾನದ ಮುಖ್ಯಸ್ಥ ಕುಶಲ ಶೆಟ್ಟಿ, ಭುಜಂಗ ಶೆಟ್ಟಿ, ಸದಾಶಿವ ಶೆಟ್ಟಿ, ದಿವಾಕರಶೆಟ್ಟಿ, ನಾಗರಾಜ ಶಟ್ಟಿ, ವಿಜಯಕುಮಾರ ಶೆಟ್ಟಿ, ಸುರೇಶ ಶೆಟ್ಟಿ, ಅಶೋಕ ಶೆಟ್ಟಿ, ನವೀನಕುಮಾರ ಶೆಟ್ಟಿ, ಉದಯಕುಮಾರ ಶೆಟ್ಟಿ, ಮತ್ತು ಸತ್ಯನಾರಾಯಣ ಶೆಟ್ಟಿ ಕುಟುಂಬವರ್ಗ, ಮಹಿಳೆಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

Exit mobile version