ರೈತರ ಅಭಿವೃದ್ಧಿಗೆ ಸಹಕಾರಿ : ಸಂಘದ ಅಧ್ಯಕ್ಷ ಎನ್.ವೈ.ಸುರೇಶ 

ರೈತರ ಅಭಿವೃದ್ಧಿಗೆ ಸಹಕಾರಿ : ಸಂಘದ ಅಧ್ಯಕ್ಷ ಎನ್.ವೈ.ಸುರೇಶ

ಹೊಸನಗರ: ಕಳೆದ ಎರಡು ವರ್ಷದ ಹಿಂದೆ ಆರಂಭಿಸಿದ ಶ್ರೀ ಶಿವಪ್ಪನಾಯಕ ಸೌಹಾರ್ದ ಸಹಕಾರಿ ರೈತರ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದು ಅಧ್ಯಕ್ಷ ಎನ್.ವೈ.ಸುರೇಶ್ ಹೇಳಿದರು

ತಾಲೂಕಿನ ನಗರ ಚಿಕ್ಕಪೇಟೆ ಗಣಪತಿ ದೇವಸ್ಥಾನದಲ್ಲಿ ನಡೆದ ಶ್ರೀ ಶಿವಪ್ಪನಾಯಕ ಸೌಹಾರ್ದ ಸಹಕಾರಿ ಸಂಘದ ಸರ್ವಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿದರು.   ಸರ್ವ ಸದಸ್ಯರ ಮತ್ತು ಠೇವಣಿದಾರರ ಸಹಕಾರದಿಂದ ಸಹಕಾರಿ ಸಂಘವು ಸಮತೋಲನ ಕಾಪಾಡಿಕೊಂಡಿದೆ.  ಮುಂದಿನ ದಿನಗಳಲ್ಲಿ ಷೇರುದಾರರು ಮತ್ತು ಠೇವಣಿದಾರ ಸಂಖ್ಯೆಯನ್ನು ಹೆಚ್ಚು ಮಾಡಿ ಸಂಸ್ಥೆಯು ಇನ್ನಷ್ಟು ಲಾಭಗೊಲಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕಲಿದೆ.‌ ಈ ವರ್ಷದಿಂದ ಷೇರುದಾರರ ಕುಟುಂಬದ ಪ್ರತಿಭಾವಂತ ವಿದ್ಯಾರ್ಥಿಗಳ ಪರಸ್ಕಾರ, ಹಾಗೂ ಷೇರುದಾರರು ಅಕಾಲಿಕ ಮರಣ ಹೊಂದಿದಲ್ಲಿ ಸಂಸ್ಥೆಯಿಂದ ಮರಣೋತ್ತರ ಆರ್ಥಿಕ ಸಹಾಯ ಮಾಡಲು ತೀರ್ಮಾನಿಸಲಾಗಿದೆ ಎಂದರು.

ಸಂಸ್ಥೆಯಲ್ಲಿ  390 ಷೇರುದಾರರಿದ್ದು ರೂ.5 ಲಕ್ಷ ಷೇರು ಸಂಗ್ರಹವಾಗಿದೆ. ರೂ.19 ಠೇವಣಿ, ರೂ. 10 ಲಕ್ಷ ಪಿಗ್ಮಿ ಸಂಗ್ರಹವಾಗಿದ್ದು, ರೂ. 24 ಲಕ್ಷ ಸಾಲ ನೀಡಲಾಗಿದೆ ಎಂದರು. ಸಂಘದ ಉಪಾಧ್ಯಕ್ಷ ಕೆ ವಿ ಸುಬ್ರಹ್ಮಣ್ಯ ಮತ್ತಿಮನೆ, ಸಹಕಾರಿಯ ಅಭಿವೃದ್ದಿಗೆ ಹೊಸ ಹೊಸ ಆರ್ಥಿಕ ಚಟುವಟಿಕೆಗಳನ್ನು ನಡೆಸುವ ಬಗ್ಗೆ ಮಾತನಾಡಿದರು. ಈ ವೇಳೆ ಕರಾಟೆ ಪ್ರತಿಭಾನ್ವಿತ ವಿದ್ಯಾರ್ಥಿ ಸುಧನ್ವ ಜಗನ್ನಾಥ್ ರನ್ನು ಗೌರವಿಸಲಾಯಿತು.

ಸಂಘದ ನಿರ್ದೇಶಕರಾದ ಮಂಜುನಾಥ ಬಿ  ಯಡೂರು,  ಪ್ರಕಾಶ್ ಪಿ ರ‌್ಯಾವೆ, ಪುರುಶೋತ್ತಮ ಕಿಲಗಾರು, ಕವಿರಾಜ ಕಾನ್‌ಬೈಲು, ದೇವರಾಜ್ ಸಾದಗಲ್, ಸುರೇಶ ಬಾವಿಕಟ್ಟೆ, ಹೆಚ್.ಟಿ.ಚಂದ್ರ ಹಲಸಿನಳ್ಳಿ, ಅಶ್ವಿನಿ ರಾಜೇಶ್, ಸವಿತಾ ರವಿಕಾಂತ, ಶ್ರುಪಾ ಹೆಂಡೆಗದ್ದೆ, ಸುಗುಣ ಕನ್ನಳ್ಳಿ, ರಸಲ್ ರಾಜು ಸಂಪೇಕಟ್ಟೆ, ಶ್ರೀಧರ ಶೆಟ್ಟಿ, ರಾಜೇಶ ಹಿರೀಮನೆ ಉಪಸ್ಥಿತರಿದ್ದರು. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಭೆ ನಿರ್ವಹಿಸಿದರು.

Exit mobile version