
ಶಿವಮೊಗ್ಗ: ಬಿಜೆಪಿ ಸರ್ಕಾರಕ್ಕೆ ದಿಕ್ಕಾರ, 40% ಸರ್ಕಾರಕ್ಕೆ ದಿಕ್ಕಾರ, 40% ಹೋಗಿ 60% ಸರ್ಕಾರ ಆಗಿರುವುದಕ್ಕೆ ಧಿಕ್ಕಾರ ಕೂಗಿದ ಕೆ.ಪಿಸಿಸಿ ವಕ್ತಾರ ಗೋಪಾಲ ಕೃಷ್ಣ ಮತ್ತು ಆರ್ ಎಂ.ಮಂಜುನಾಥ್ ಗೌಡ ನಾಗೋಡಿಯ ಬೈಂದೂರು ಮತ್ತು ಕೊಲ್ಲೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆಯ ಪ್ರತಿಭಟನೆ ನಡೆಸಿದರು.
ಹೊಸನಗರ ತಾಲೂಕಿನ ನಾಗೋಡಿ ಗ್ರಾಮದಲ್ಲಿ ಜಿಬಿಎನ್ ತಡೆಗೋಡೆ ಕುಸಿದಿದ್ದು ಇದರಲ್ಲಿ ಭಾರಿ ಭ್ರಷ್ಠಾಚಾರ ನಡೆದಿದೆ ಎಂದು ಆರೋಪಿಸಿ ಗೋಪಾಲ ಕೃಷ್ಣ ಬೇಳೂರು ಪ್ರತಿಭಟನೆ ನಡೆಸಿದ್ದಾರೆ. ತಾಂತ್ರಿಕ ವರದಿ ಮಾಡಿಸಿ ನಂತರ ಕಾಮಗಾರಿ ನಡೆದಿತ್ತು. ಆದರೆ ಕಾಮಗಾರಿಗೆ ಮುಂಚೆ ನಡೆದ ವರದಿ ಏನು ಹೇಳಿತ್ತು ತಡೆಗೋಡೆ ಕುಸಿದಿದ್ದು ಯಾಕೆ ಎಂದು ಪ್ರಶ್ನಿಸಿದರು.


ಈ ಕಾಮಗಾರಿಗೆ ಹೊಸದಾಗಿ ಹಣ ಬಿಡುಗಡೆ ಮಾಡುವುದಲ್ಲ ಭ್ರಷ್ಠಾ ಅಧಿಕಾರಿಗಳಿಂದಲೇ ಮತ್ತೆ ಹಣ ವ್ಯಯಮಾಡಿಸಿ ಕಾಮಗಾರಿ ನಡೆಸಬೇಕು. ಇದಕ್ಕೂ ಮೊದಲು 54 ಲಕ್ಷ ರೂ. ಹಣ ವ್ಯಯಮಾಡಿ ಕರ್ಚು ಮಾಡಲಾಗಿತ್ತು. ನಂತರ ಅಧಿಕಾರಿಗಳ ತಂಡ ಸ್ಥಳಕ್ಕೆ ಬಂದು ವರದಿ ಸಲ್ಲಿಸಿದರು.
4.8 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಪೂರ್ಣಗೊಳ್ಳುವ ಮೊದಲೇ ಜಿಬಿಎನ್ ತಡೆಗೋಡೆ ಕುಸಿದಿದೆ. ಹಾಗಾಗಿ ಲೋಕಾಯುಕ್ತ ಮತ್ತು ಎಸಿಬಿ ತನಿಖೆ ಮಡೆಸಬೇಕು. ಅಧಿಕಾರಿಗಳ ಹಣದಿಂದಲೇ ಮರು ನಿರ್ಮಾಣವಾಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಾಸ್ತಿಕಟ್ಟೆ ಸುಬ್ರಹಮ್ಮಣ್ಯ, ನಾಗೋಡಿ ಗ್ರಾಮಪಂಚಾಯಿತಿ ಅಧ್ಯಕ್ಷ ವಿನೋದ ಗುರುಮೂರ್ತಿ, ಮಧುಕರ್ ಕರಿಮನೆ, ಮಂಜು ಸಣ್ಣಕ್ಕಿ, ನಾಗರಾಜ್ ಕುರುವಳ್ಳಿ ಕಾಂಗ್ರೆಸ್ ನ ಸೋಷಿಯಲ್ ಮೀಡಿಯಾದ ಜಿಲ್ಲಾ ಕಾರ್ಯದರ್ಶಿ ಚೇತನ್ ಉಪಸ್ಥಿತರಿದ್ದರು
