
ಇಂದು ನಿಟ್ಟೂರಿನಲ್ಲಿ ಪ್ರತಿಭಟನೆ: ಎಂಎಲ್‌ಸಿ ಡಿ.ಎಸ್.ಅರುಣ್ ಬಾಗಿ
ಹೊಸನಗರ: ನಿಟ್ಟೂರು ಗ್ರಾಪಂ ವ್ಯಾಪ್ತಿಯಲ್ಲಿ ಭ್ರಷ್ಟಾಚಾರ ವಿರೋಧಿ ಹೋರಾಟ ಸಮಿತಿ ನ.23 ರಂದು ಪಂಚಾಯ್ತಿ ಆಡಳಿತ ಮಂಡಳಿಯ ಅಕ್ರಮ ಅವ್ಯವಹಾರಗಳ ವಿರುದ್ಧ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.
ಸ್ಥಳೀಯ ಗ್ರಾಪಂನಲ್ಲಿ ಯಾವುದೇ ದಾಖಲೆ ಇಲ್ಲದೆಯೂ ರೂ.30 ಲಕ್ಷ ಕೋವಿಡ್ ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದು. ಮಳೆಹಾನಿ ಅಂತ ದಾಖಲೆ ಸೃಷ್ಟಿಸಿ ರೂ.5 ಲಕ್ಷ ಪರಿಹಾರ ಕೊಡಿಸಲು ಯತ್ನ, ನಿಟ್ಟೂರು ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಕೆ ಅವ್ಯವಸ್ಥೆ, ಪಂಚಾಯತ್ ನಿಯಮ ಪಾಲಿಸದೇ ಸಾಮಾನ್ಯ ಸಭೆ ನಡಾವಳಿ ತಿದ್ದುವುದು, ಸದಸ್ಯರ ಹಕ್ಕನ್ನು ಕಸಿಯಲಾಗುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಗ್ರಾಪಂ ಕಾರ್ಯಾಲಯದ ಎದುರು ನಡೆಯುವ ಪ್ರತಿಭಟನೆಗೆ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಭಾಗವಹಿಸಲಿದ್ದಾರೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.
VIDEO REPORT| ನಾಳೆ (ನ.23) ನಿಟ್ಟೂರಿನಲ್ಲಿ ಪ್ರತಿಭಟನೆ