
ಹೊಸನಗರ: ಒಂದಾಯ್ತು.. ಎರಡಯಾಯ್ತು.. ಬೆಳಕಿಗೆ ಬಂತು ಮತ್ತೊಂದು ವಿದ್ಯಾಸಂಸ್ಥೆಯ ಪ್ರಕರಣ.
ಹೌದು ಕೊಡಚಾದ್ರಿ ಪದವಿ ಕಾಲೇಜು, ನಗರ ಅಮೃತ ವಿದ್ಯಾಲಯದ ಕಳ್ಳತನದ ಬಳಿಕ ನಗರ ವಿದ್ಯಾಸಂಸ್ಥೆಯ ಹೈಸ್ಕೂಲು ವಿಭಾಗದಲ್ಲಿ ಕಳ್ಳತನಕ್ಕೆ ಪ್ರಯತ್ನಿಸಿದ ಘಟನೆ ಸೋಮವಾರ ರಾತ್ರಿ ನಡೆದಿದೆ.
ಹೈಸ್ಕೂಲ್ ಆಫೀಸ್ ಛೇಂಬರ್ ಮತ್ತು ವಿಜ್ಞಾನ ರೂಂನ ಬಾಗಿಲಿನ ಬೀಗ ಒಡೆದು ಒಳಗಿನ ಬೀರುಗಳನ್ನು ಜಾಲಾಡಿದ್ದಾರೆ.
ನಗರ ಠಾಣೆ ಪಿಎಸ್ಐ ನಾಗರಾಜ್ ಸ್ಥಳ ಪರಿಶೀಲನೆ ನಡೆಸಿದರು.
ಒಟ್ಟಾರೆ ಶಾಲಾ ಕಾಲೇಜನ್ನು ಕೇಂದ್ರವಾಗಿಟ್ಟು ಕಳ್ಳತನ ನಡೆಸುತ್ತಿರುವುದು ಪೊಲೀಸರಿಗೆ ತಲೆನೋವು ತಂದಿದೆ.
ಶಾಲಾ ಕಾಲೇಜುಗಳಲ್ಲಿ ಭದ್ರಾತಾ ಸಿಬ್ಬಂದಿ ಮತ್ತು ಸಿಸಿಟಿವಿ ನಿರ್ವಹಣೆಯಲ್ಲಿ ನಿರ್ಲಕ್ಷತನ ತೋರುತ್ತಿರುವುದು ಕಂಡು ಬಂದಿದೆ.
ಹೊಸನಗರ ಕೊಡಚಾದ್ರಿ ಪದವಿ ಕಾಲೇಜಿನಲ್ಲಿ ಕಳ್ಳತನವಾಗಿರುವುದು ಗುಡುಗು ಸಿಡಿಲು ಬಂದು ಕರೆಂಟ್ ಇಲ್ಲದ ವೇಳೆಯಲ್ಲಿ. ನಗರದಲ್ಲೂ ಕೂಡ ಸೋಮವಾರ ರಾತ್ರಿ ಅದೇ ವಾತಾವರಣ ಇತ್ತು.
ಮೂರು ಕಳ್ಳತನಗಳು ಕೂಡ ಒಂದೇ ಮಾದರಿಯಲ್ಲಿದ್ದು ಒಂದೇ ತಂಡ ಈ ಕೃತ್ಯ ನಡೆಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
