ಜನಾನುರಾಗಿ ಪೋಲಿಸ್ ಸರ್ಕಲ್ ಇನ್ಸ್ ಪೆಕ್ಟರ್ ನಂಜಪ್ಪ ಇನ್ನಿಲ್ಲ

ಜನಾನುರಾಗಿ ಪೋಲಿಸ್ ಸರ್ಕಲ್ ಇನ್ಸ್ ಪೆಕ್ಟರ್ ನಂಜಪ್ಪ ಇನ್ನಿಲ್ಲ

 

ಶಿವಮೊಗ್ಗ: ಶಿವಮೊಗ್ಗ ಮೂಲದ ಪೊಲೀಸ್ ವೃತ್ತ ನಿರೀಕ್ಷಕ ನಂಜಪ್ಪ ಅವರು ನಿನ್ನೆ ರಾತ್ರಿ ತೀವ್ರ ಅನಾರೋಗ್ಯದಿಂದ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನ ರಾಗಿದ್ದಾರೆ.
ನಂಜಪ್ಪ ಅವರು ಈ ಹಿಂದೆ ಹೊಸನಗರ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಆಗಿ ಬಳಿಕ ಶಿವಮೊಗ್ಗದ ವಿನೋಬನಗರ ರಾಣಿಯಲ್ಲಿ ಕಾರ್ಯನಿರ್ವಹಿಸಿ ನಂತರ ಪದೋನ್ನತಿ ಒಂದೇ ಕುಂದಾಪುರದ ಕರಾವಳಿ ಕಾವಲು ಪಡೆಯಲಿ ವೃತ್ತ ನಿರೀಕ್ಷಕರಾಗಿ ಸುಮಾರು ಎರಡು ವರ್ಷಗಳಿಂದ ಕಾರ್ಯನಿರ್ವಹಿಸಿದ್ದರು ಬಳಿಕ ಕುಂದಾಪುರ ಟೌನ್ ಠಾಣೆಗೆ ವರ್ಗಾವಣೆಗೊಂಡು ಅಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಮೃತರಿಗೆ ಇಬ್ಬರು ಮಕ್ಕಳಿದ್ದು ಪತ್ನಿ ಕೆಲ ವರ್ಷಗಳ ಹಿಂದೆ ತೀರಿಹೋಗಿದ್ದಾರೆ. ಹೊಸನಗರ ಪೊಲೀಸ್ ಠಾಣೆ ಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ತಮ್ಮ ಕಾರ್ಯವೈಕರಿಯ ಮೂಲಕವಾಗಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು.

Exit mobile version