ಮಕ್ಕಳ ಸುಪ್ತ ಪ್ರತಿಭೆಯನ್ನು ಉಕ್ಕಿಸುವ ಕಾರಂಜಿ: ಕರುಣಾಕರ ಶೆಟ್ಟಿ : ನಗರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಗೆ ಚಾಲನೆ

ಮಕ್ಕಳ ಸುಪ್ತ ಪ್ರತಿಭೆಯನ್ನು ಉಕ್ಕಿಸುವ ಕಾರಂಜಿ: ಕರುಣಾಕರ ಶೆಟ್ಟಿ : ನಗರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಗೆ ಚಾಲನೆ

ಹೊಸನಗರ: ಪ್ರತಿಭಾಕಾರಂಜಿ ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಉಕ್ಕಿಸುವ ಕಾರಂಜಿಯಾಗಲಿ ಎಂದು ಗ್ರಾಪಂ ಒಕ್ಕೂಟದ ಸಂಚಾಲಕ ಕರುಣಾಕರ ಶೆಟ್ಟಿ ಹೇಳಿದರು.

ತಾಲೂಕಿನ ನಗರದ ಸರ್ಕಾರಿ ಪ್ರಾಥಮಿಕ ಬಾಲಕಿಯರ ಶಾಲೆಯಲ್ಲಿ ನಗರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಗೆ ಚಾಲನೆ ನೀಡಿ ಮಾತನಾಡಿದರು.

ಪ್ರತಿಭಾ ಕಾರಂಜಿ ಸರ್ಕಾರ ಮಹತ್ವದ ಕಾರ್ಯಕ್ರಮ ಮಾತ್ರವಲ್ಲದೇ ಮಕ್ಕಳ ಪ್ರತಿಭೆ ಅನಾವರಣಕ್ಕಿರುವ ಉತ್ತಮ ವೇದಿಕೆ. ಇದರಿಂದಾಗಿ ನಾಡಿನಲ್ಲಿ ಸಾಕಷ್ಟು ಉತ್ತಮ ಕಲಾವಿದರು ರೂಪುಗೊಂಡಿದ್ದಾರೆ ಎಂದರು.

ಪ್ರತಿಭಾ ಕಾರಂಜಿ ಕೇವಲ ಸ್ಪರ್ಧೆಗಾಗಿ ಅಲ್ಲ. ಅದು ಸಾಂಸ್ಕೃತಿಕ ಹಬ್ಬವಾಗಬೇಕು. ಸರ್ಕಾರ ಪ್ರತಿ ಕಾರಂಜಿಗೂ ಸೂಕ್ತ ಅನುದಾನ ನೀಡಬೇಕು. ಮತ್ತು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದರು.

ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಕೆ.ರಮೇಶ್ ಅಧ್ಯಕ್ಷತೆ ವಹಿಸಿದ್ದರು.
ಶಿಕ್ಷಣಾಧಿಕಾರಿ ಹೆಚ್.ಆರ್.ಕೃಷ್ಣಮೂರ್ತಿ, ತಾಪಂ ಮಾಜಿ ಸದಸ್ಯೆ ಜಯಲಕ್ಷ್ಮೀ ಎಸ್.ರಾವ್, ಶಾರದ ಗೋಖಲೆ, ಸಿಆರ್ಪಿ ವಿ.ಡಿ.ನಾಗರಾಜ್, ಶಿಕ್ಷಕರ ಸಂಘದ ಅರವಿಂದ್, ಮುಖ್ಯ ಶಿಕ್ಷಕಿ ಸಾಕಮ್ಮ ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಶಿಲ್ಪಾ ಹೊಳ್ಳ, ಸದಸ್ಯರಾದ ದೇವರಾಜ ಚಿಕ್ಕಪೇಟೆ ದೇವು ಬಾಳೆಕೊಪ್ಪ, ರಾಘವೇಂದ್ರ ನಗರ, ಗುರುರಾಜ್, ಸುನೀತಾ ಶೇಟ್, ಹೇಮಾವತಿ, ಸರಿತಾ ಇತರರು ಇದ್ದರು.

ತೀರ್ಪುಗಾರರಾಗಿ ಶಿಕ್ಷಕರಾದ ಪ್ರಕಾಶ ವಾರದ್, ಜ್ಞಾನೇಶ್ವರಿ, ಸಲ್ಮಾ ಜಿ.ಹೆಚ್, ವೆಂಕಟೇಶ ವೈದ್ಯ, ಕುಮಾರ್, ಪ್ರದೀಪ್ ಹೆಚ್.ಕೆ, ಮಂಜುನಾಥ ಹೆಚ್.ಡಿ, ಜಿಶಾ ಎ.ಜೆ, ಸುಜಾತ, ದೇವರಾಜ ಎಂ.ಎಸ್, ಗಣೇಶ ಎಂ.ಆರ್, ವೈಲೆಟ್ ಹೆಚ್.ಬಿ, ದಾಕ್ಷಾಯಿಣಿ, ಅಹಲ್ಯ ಹೆಚ್.ಎಸ್, ತೀರ್ಥಪ್ಪ ಎಸ್.ಎಂ, ರಾಮನಾಯ್ಕ, ದೇವೇಂದ್ರಪ್ಪ, ಸಾವಿತ್ರಮ್ಮ, ಪೂರ್ಣಿಮ ಎಲ್.ಎಸ್, ಅಂಬಿಕಾ ಕಾರ್ಯ ನಿರ್ವಹಿಸಿದರು.

ಮುಖ್ಯ ಶಿಕ್ಷಕಿ ಸಾಕಮ್ಮ ಸ್ವಾಗತಿಸಿದರು. CRP ವಿ.ಡಿ.ನಾಗರಾಜ ವಂದಿಸಿದರು. ಮಂಜುಳಾ, ಮಾನಸ, ಐಶ್ವರ್ಯ ಕಾರ್ಯಕ್ರಮ ನಿರ್ವಹಿಸಿದರು.

Exit mobile version