
HULIKAL GHAT| ಹುಲಿಕಲ್ ಗುಡ್ಡ ಕುಸಿತ ಸ್ಥಳಕ್ಕೆ PWD ಸಿಇ ಜಗದೀಶ ನಾಯ್ಕ ಭೇಟಿ : ಮಳೆಯ ಬಳಿಕ ಕಾಮಗಾರಿ ನಿರ್ವಹಣೆಗೆ ಸೂಚನೆ
ಹೊಸನಗರ: ಮಾಸ್ತಿಕಟ್ಟೆಯಿಂದ ಹುಲಿಕಲ್ ಮಾರ್ಗದ ಮಾವಿನಗದ್ದೆ (ಕಾಕೋಡು ಕ್ರಾಸ್) ರಸ್ತೆ ಪಕ್ಕದ ಧರೆ ಕುಸಿತ ಮತ್ತು ಹುಲಿಕಲ್ ಘಾಟಿಯ ಗುಡ್ಡ ಕುಸಿತ ಸ್ಥಳಕ್ಕೆ ಲೋಕೋಪಯೋಗಿ ಇಲಾಖೆಯ ಸಿಇ ಜಗದೀಶ ನಾಯ್ಕ ಭೇಟಿ ನೀಡಿ ಪರಿಶೀಲಿಸಿದರು.

ಮುಂಜಾಗೃತ ಕ್ರಮಗಳ ಅಳವಡಿಕೆ ಮತ್ತು ಮಳೆಗಾಲದ ನಂತರ ಕಾಮಗಾರಿ ನಡೆಸಲು ಗುತ್ತಿಗೆದಾರ ಸಿ.ವಿ.ಚಂದ್ರಶೇಖರ್, ಪ್ರದೀಪ್‌ಗೆ ಸೂಚಿಸಿದರು.
ಇಇ ಬಿ.ಎಸ್.ನಾಗೇಶ್, ಎಇಇ ಸಂತೋಷ್ ನಾಯ್ಕ್, ಎಇ ಕೊಟ್ರೇಶ್, ವಿಶ್ವಾಸ್ ಇದ್ದರು.

Show quoted text
