
ರಿಪ್ಪನ್‌ಪೇಟೆ: ಕ್ರೀಡೆಗಳಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ಬರಬೇಕಿದೆ. ವಿದ್ಯಾರ್ಥಿಗಳು ವಿವಿಧ ರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ರಾಷ್ಟ್ರೀಯ ಪ್ರಜ್ಞೆ ಏಕತಾ ಮನೋಭಾವ ಮೂಡಲು ಸಾಧ್ಯ ಎಂದು ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಲಪ್ಪ ಹರತಾಳು ಹೇಳಿದರು.
ರಿಪ್ಪನ್‌ಪೇಟೆಯ ಸರ್ಕರಿ ಪದವಿ ಪೂರ್ವ ಕಾಲೇಜ್‌ನ ಚಿನ್ನೇಗೌಡ ಕ್ರೀಡಾಂಗಣದಲ್ಲಿ ಹೊಸನಗರ ತಾಲ್ಲೂಕು ಪದವಿ ಪೂರ್ವ ಕಾಲೇಜು ಮಟ್ಟದ 2022-23 ನೇ ಸಾಲಿನ ಕ್ರೀಡಾಕೂಟದ ಕ್ರೀಡಾ ದ್ವಜಾರೋಹಣ ನೆರವೇರಿಸಿ ಮಾತನಾಡಿ, ಗೆಲುವು ಸೋಲುಗಳು ಬದುಕಿನ ಸ್ವಾಭಾವಿಕ, ಎರಡನ್ನೂ ಸಮಚಿತ್ತದಿಂದ ಸ್ವೀಕರಿಸುವ ಮನೋಸ್ಥೈರ್ಯ ನಿಮ್ಮದಾಗಲಿ ಎಂದರು.
ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಎ. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಕೃಷ್ಣಪ್ಪ, ಕ್ರೀಡಾ ಪ್ರತಿಜ್ಞಾ ವಿಧಿ ಬೋಧಿಸಿದರು.
ಗ್ರಾ.ಪಂ. ಅಧ್ಯಕ್ಷೆ ಮಂಜುಳ ಕೇತಾರ್ಜಿರಾವ್, ಉಪಾಧ್ಯಕ್ಷೆ ಮಹಾಲಕ್ಷ್ಮಿ, ಸಿಡಿಸಿ ಉಪಾಧ್ಯಕ್ಷ ದೇವೇಂದ್ರಪ್ಪಗೌಡ ನೆವಟೂರು,.ಗಣೇಶ್ ಐತಾಳ್, ಚಂದ್ರುಬಾಬು, ತಾಲೂಕು ದೈಹಿಕ ಪರಿವೀಕ್ಷಕ ಕೆ.ಬಾಲಚಂದ್ರ, ರಮೇಶ್, ಸಿಡಿಸಿ ನಿರ್ದೇಶಕರಾದ ಎಂ. ಸುರೇಶ್ ಸಿಂಗ್, ಪದವಿಪೂರ್ವ ಕಾಲೇಜ್ ಸಿಡಿಸಿ ನಿರ್ದೇಶಕ ಎಂ.ಬಿ.ಮಂಜುನಾಥ ಇನ್ನಿತರರು ಹಾಜರಿದ್ದರು.