
-
ಸಾದಗಲ್ ವೃದ್ಧೆ ನಾಪತ್ತೆ ಪ್ರಕರಣ | ಪಿಎಸ್ಐ ರಮೇಶ ನೇತೃತ್ವದಲ್ಲಿ ಶ್ವಾನದಳ ಶೋಧ ಕಾರ್ಯಕ್ಕೆ ಚಾಲನೆ
ಹೊಸನಗರ: ಮೂರು ದಿನದ ಹಿಂದೆ ನಾಪತ್ತೆಯಾಗಿದ್ದ ಸಾದಗಲ್ ವೃದ್ಧೆಯ ಶೋಧ ಕಾರ್ಯ ಮುಂದುವರೆದಿದೆ.
ಮಂಗಳವಾರ ಬೆಳಿಗ್ಗೆ ನಗರ ಠಾಣೆ ಪಿಎಸ್ಐ ರಮೇಶ್ ಪಿ.ಎಸ್ ನೇತೃತ್ಬದಲ್ಲಿ ಶ್ವಾನದಳ ಶೋಧಕಾರ್ಯಕ್ಕೆ ಚಾಲನೆ ನೀಡಲಾಗಿದೆ.


ಮತ್ತೊಂದಡೆ ಅರಣ್ಯ ಇಲಾಖೆ ತಂಡ ಕೂಡ ಶೋಧ ಕಾರ್ಯ ನಡೆಸುತ್ತಿದೆ. ಕಾರ್ಯಾಚರಣೆಯಲ್ಲಿ ಸ್ಥಳೀಯ ಗ್ರಾಮಸ್ಥರು ಸಾಥ್ ನೀಡಿದ್ದಾರೆ.
ಈಗಾಗಲೇ ಕಾರ್ಯಾಚರಣೆ ಆರಂಭಗೊಂಡು ಒಂದು ಗಂಟೆ ಕಳೆದಿದ್ದು ವೃದ್ಧೆ ಶಾರದಮ್ಮ ಸುಳಿವು ಸಿಕ್ಕಿಲ್ಲ. ಚನ್ನಪ್ಪಗೌಡ ಮನೆ ಮುಂದೆ ಜನರು ಜಮಾಯಿಸಿದ್ದು ಸುರಕ್ಷಿತವಾಗಿ ವೃದ್ಧೆಯ ಪತ್ತೆಗೆ ಪ್ರಾರ್ಥಿಸಿದ್ದಾರೆ.
ಶ್ವಾನ ದಳದ ARSI ಚಂದ್ರಪ್ಪ, HC ಪ್ರಸನ್ನ, ಪೊಲೀಸ್ ಸಿಬ್ಬಂದಿಗಳಾದ HC ವೆಂಕಟೇಶ್, HC ಪ್ರವೀಣ್, HC ಮಂಜುನಾಥ್, ಶಾಂತಪ್ಪ, ವಿನಯಕುಮಾರ್, ಮಂಜುನಾಥ್, ಸುಜಯಕುಮಾರ್, ಅರಣ್ಯ ಇಲಾಖೆಯ ARFO ಗಳಾದ ಸತೀಶ್, ಅಮೃತ್ ಸುಂಕದ್, ಪ್ರವೀಣಕುಮಾರ್, ನರೇಂದ್ರಕುಮಾರ್, ಅರಣ್ಯ ರಕ್ಷಕರು ಸೇರಿದಂತೆ ಒಟ್ಟು ಮೂರು ಇಲಾಖೆಯಿಂದ ನಡೆಯುತ್ತಿರುವ ಜಂಟಿಕಾರ್ಯಾಚರಣೆಯಲ್ಲಿ 30 ಕ್ಕು ಹೆಚ್ಚು ಸಿಬ್ಬಂದಿಗಳು ಭಾಗಿಯಾಗಿದ್ದಾರೆ.
