
-
SHIVAMOGGA|ಪೆಟ್ಟಿಗೆಯೊಳಗಿದ್ದ ಪೌಡರ್ ಯಾವುದು | ಬಾಕ್ಸ್ ಸ್ಪೋಟದ ನಂತರ ಗೊತ್ತಾಗಿದ್ದೇನು | ಎರಡು ಬಾಕ್ಸ್ ಗಳ ಪ್ರತ್ಯೇಕ ಸ್ಟೋಟ | ಈ ಬಗ್ಗೆ ರಕ್ಷಣಾಧಿಕಾರಿ ಹೇಳಿದ್ದೇನು? ಶಾಸಕ ಚನ್ನಬಸಪ್ಪ ಪ್ರತಿಕ್ರಿಯೆ ಕೊಟ್ಟಿದ್ದು ಹೀಗೆ!
ಶಿವಮೊಗ್ಗ: ರೈಲ್ವೆ ನಿಲ್ದಾಣದ ಬಳಿ ಪತ್ತೆಯಾದ ಎರಡು ಅನುಮಾನಾಸ್ಪದ ಪೆಟ್ಟಿಗೆಗಳನ್ನ ತಡರಾತ್ರಿ ಪ್ರತ್ಯೇಕವಾಗಿ ಸ್ಪೋಟಿಸಲಾಗಿದೆ. ಬಾಕ್ಸ್ ನೊಳಗೆ ಎರಡು ಬಿಳಿಯ ಪೌಡರ್ ಬ್ಯಾಗ್ ಗಳು ಕಂಡು ಬಂದಿದ್ದು ಮಾಹಿತಿ ಪಡೆಯಲು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ.
ಸ್ಪೋಟಕ ವಸ್ತು ಅಲ್ಲ: ಶಿವಮೊಗ್ಗ ಎಸ್ಪಿ|
ಪತ್ತೆಯಾದ ಬಿಳಿ ಪೌಡರ್ ನ ಬ್ಯಾಗ್ ಗಳು ಸ್ಪೋಟಕ ವಸ್ತು ಅಲ್ಲ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಾಹಿತಿ ನೀಡಿದ್ದಾರೆ. ಆದರೆ ಶಾಸಕ ಚೆನ್ನಬಸಪ್ಪ ಮುಖಕ್ಕೆ ಹಚ್ಚಿಕೊಳ್ಳುವ ಪೌಡರ್ ಅಂತೂ ಪತ್ತೆಯಾಗಿಲ್ಲ. ಈ ಬಗ್ಗೆ ಅನುಮಾನವಿದೆ ಎಫ್ ಎಸ್ ಎಲ್ ವರದಿ ಬಂದ ನಂತರವೇ ಸ್ಪಷ್ಟವಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ತಡರಾತ್ರಿ ಎರಡು ಪೆಟ್ಟಿಗೆಗಳನ್ನ ಸ್ಪೋಟಿಸಿದ ನಂತರ ಘಟನಾ ಸ್ಥಳಕ್ಕೆ ತೆರಳಿ ಮಾಹಿತಿ ಪಡೆಯುತ್ತಿದ್ದ ಶಾಸಕ ಚೆನ್ನಬಸಪ್ಪ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಶಿವಮೊಗ್ಗ ಸೇಫ್.. ಆತಂಕ ನಿವಾರಣೆಯಾಗಿದೆ. ಅನುಮಾನಾಸ್ಪದವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ನೈಜಸಂಗತಿ ಹೊರಬರಲಿ ಎಂದಿದ್ದಾರೆ.
ಇದು ಮುಖಕ್ಕೆ ಹಚ್ಚುವ ಪೌಡರ್ ಅಂತೂ ಅಲ್ಲ
ದೇವರು ದೊಡ್ಡವನು ಈ ಹಂತದಲ್ಲಿ ತಡೆ ಹಿಡಿಯುವ ಪ್ರಯತ್ನ ಆಗಿದೆ. ಸಿಕ್ಕಿಬಿದ್ದವರನ್ನ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಸತ್ಯ ಸಂಗತಿ ಹೊರ ಬರಲಿ. ಅನಾಹುತ ಆಗುವುದನ್ನು ತಪ್ಪಿಸಿದ್ದಾರೆ. ಇದನ್ನು ಮುಚ್ಚಿ ಹಾಕುವ ಪ್ರಯತ್ನ ಆಗಬಾರದು. ಒಟ್ಟಿನಲ್ಲಿ ಶಿವಮೊಗ್ಗ ಸೇಫ್ ಎಂದಿದ್ದಾರೆ.