
ಶಿವಮೊಗ್ಗ : ವಿನೋಬನಗರದಲ್ಲಿ ಯುವಕನ ಹ*ತ್ಯೆ!
ಶಿವಮೊಗ್ಗ:
ವಿನೋಬಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 26 ವರ್ಷದ ಅರುಣ್ ಹತ್ಯೆಗೀಡಾಗಿದ್ದಾನೆ. ಆತನ ಸಂಬಂಧಿಕರು ಇದನ್ನು ಮಾಡಿರುವ ಶಂಕೆ ಇದೆ. ಕೌಟುಂಬಿಕ ಕಲಹವೇ ಇದರ ಹಿಂದಿನ ಕಾರಣವೆಂದು ಹೇಳಲಾಗುತ್ತಿದೆ. ಇಬ್ಬರು ಆರೋಪಿಗಳನ್ನು ಗುರುತಿಸಲಾಗಿದ್ದು, ಅವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ತಿಳಿಸಿದ್ದಾರೆ.











