
ಕುತೂಹಲದತ್ತ ಶಿವಮೊಗ್ಗ ಲೋಕಸಭಾ ಚುನಾವಣೆ | ಮೋದಿ ಅಲೆಯನ್ನೇ ಮೀರಲಿದೆಯೇ.. ಜಾತಿ ಸಮೀಕರಣ.. ಪರಿವಾರದ ಲೆಕ್ಕಾಚಾರ..!
ಶಿವಮೊಗ್ಗ: ಇಂದು ಎರಡು ಬಾರಿ ಪ್ರಧಾನಿಯಾಗಿ ಯಶಸ್ವಿ ಕಂಡ ಪ್ರಧಾನಿ ಮೋದಿ ಅಲೆಯನ್ನೇ ನಂಬಿ ಬಿಜೆಪಿ ದೇಶದಲ್ಲಿ ಮತ್ತೊಮ್ಮೆ ಬಿಜೆಪಿ ಬಾವುಟ ಹಾರಿಸುವ ಉತ್ಸಾಹದಲ್ಲಿದೆ. ಆದರೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮೋದಿ ಅಲೆಯನ್ನೇ ಮೀರಿಸುವ ಜಾತಿ ಸಮೀಕರಣ.. ಪರಿವಾರದ ಲೆಕ್ಕಾಚಾರ ನಡೆಯಲಿದೆಯೇ..ಎಂಬ ಮಾತುಗಳು ಎಲ್ಲಾ ಪಕ್ಷಗಳ ರಾಜಕೀಯ ಪಡಸಾಲೆಯಲ್ಲಿ ಚರ್ಚೆಗಳು ನಡೆಯುತ್ತಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಶಿವಮೊಗ್ಗ ಮತಕ್ಷೇತ್ರದಲ್ಲಿ ಯಾವ ಸಮುದಾಯ ಹೆಚ್ಚಿದೆ.. ಎಷ್ಟು ಪ್ರಮಾಣ ಮತದಾನ ಆಗಲಿದೆ. ಪರಿವಾರದ ಕಟ್ಟಾಳು ಕೆ.ಎಸ್.ಈಶ್ವರಪ್ಪ ಹಿಂದಿರೋರು ಯಾರು, ಪರಿವಾರ ಲೆಕ್ಕಾಚಾರ ಏನು.. ಬಿ.ವೈ.ರಾಘವೇಂದ್ರ ಹಿಂದಿನ ಲೀಡ್ ಉಳಿಸಿಕೊಳ್ತಾರಾ.. ಗೀತಾ ಶಿವರಾಜ್ ಕುಮಾರ್ ಅನುಕಂಪ ಗಿಟ್ಟಿಸುತ್ತಾರಾ.. ಗ್ಯಾರಂಟಿ ಲಾಭ ಪಡೆಯುತ್ತಾರಾ.. ಗೆದ್ದು ಮೋದಿ ಪರವಾಗಿ ಕೈ ಎತ್ತುತ್ತೇನೆ ಎಂದು ಬಂಡಾಯ ಎದ್ದಿರುವ ಕೆ.ಎಸ್.ಈಶ್ವರಪ್ಪ ಪಡೆದುಕೊಳ್ಳುವ ಮತಗಳೆಷ್ಟು.. ಇವೆಲ್ಲವೂ.. ಚರ್ಚೆಯಲ್ಲಿರು ವಿಷಯ..
ಕಳೆದ ಬಾರಿ ಮೋದಿ ಅಲೆ.. ಪುಲ್ವಾಮ ದಾಳಿ ಚುನಾವಣಾ ಚಿತ್ರಣವನ್ನೇ ಬದಲಿಸಿತ್ತು.. ಈ ಬಾರಿಯೂ ಮೋದಿ ಜನಪ್ರಿಯತೆ ಇದೆಯಾದರೂ.. ಹಿಂದಿನ ಬಾರಿ ಇದ್ದ ಬಿಜೆಪಿಯ ಸಂಘಟನೆ, ಜೋಷ್ ಕಾರ್ಯಕರ್ತರಲ್ಲಿ ಅಷ್ಟಾಗಿ ಕಂಡು ಬರುತ್ತಿಲ್ಲ. ಇನ್ನು ಬಿ.ವೈ.ಆರ್ ಗೆ ಹೋಲಿಸಿದರೆ ವಯಕ್ತಿಕವಾಗಿ ವರ್ಚಸ್ಸು ಹೊಂದಿರದ ಗೀತಾ ಶಿವರಾಜ್ ಕುಮಾರ್ ಗೆ.. ಕಾಂಗ್ರೆಸ್ ಸರ್ಕಾರ, ಗ್ಯಾರಂಟಿ ಯೋಜನೆ ಪ್ಲಸ್ ಪಾಯಿಂಟ್ ಅಂದುಕೊಂಡಂತಿದೆ. ಈ ನಡುವೆ ಈಶ್ವರಪ್ಪ ತೆಗೆದುಕೊಳ್ಳುವ ಮತಗಳ ಬಗ್ಗೆ ಬಿಜೆಪಿಗಿಂತ ಕಾಂಗ್ರೆಸ್ ನಲ್ಲೇ ಚರ್ಚೆ ಜೋರಾದಂತೆ ಕಂಡು ಬರುತ್ತಿದೆ.
ಇನ್ನು ಕೆ.ಎಸ್.ಈಶ್ವರಪ್ಪ ಸ್ಪರ್ಧೆ ಒಂದಷ್ಟು ಕುತೂಹಲದ ಚರ್ಚೆಯ ಜೊತೆ ಅನುಮಾನವನ್ನು ಸೃಷ್ಟಿಸಿದಂತೆ ಕಾಣುತ್ತಿದೆ.
ಕೆ.ಎಸ್.ಈಶ್ವರಪ್ಪ ಹಿಂದೆ ಕಾಣದ ಕೈಗಳು ಬಹಳ ಕೆಲಸ ಮಾಡುತ್ತಿವೆ. ಸಂಘ ಪರಿವಾರದ ಕಟ್ಟಾಳು ಆಗಿರುವ ಈಶ್ವರಪ್ಪರನ್ನು ಪರಿವಾರ ಕೈಬಿಡುವುದಿಲ್ಲ.. ಆದರೆ ಮೋದಿ ಅಲೆಯ ಲಾಭಕ್ಕೆ ಈಶ್ವರಪ್ಪ ಕೈಹಾಕುವರೇ ಎಂಬ ಲೆಕ್ಕಾಚಾರಗಳು ಈಬಾರಿಯ ಚರ್ಚೆಯ ಹೈಲೈಟ್ಸ್.


ಮೋದಿ ಅಲೆ, ಕಾಂಗ್ರೆಸ್ ಗ್ಯಾರಂಟಿ, ಈಶ್ವರಪ್ಪರ ಪರಿವಾರದ ನಂಟು, ಜೊತೆಗೆ ವೀರಶೈವ ಲಿಂಗಾಯಿತ, ಈಡಿಗ, ಕುರುಬ, ಅಲ್ಪಸಂಖ್ಯಾತ ಸಮುದಾಯಗಳ ಒಲವು, ಮತದಾನದ ಪ್ರಮಾಣ ಹೀಗೆ ಚುನಾವಣೆ ಮೇಲೆ ಪರಿಣಾಮ ಬೀರುವ ಅಂಶಗಳ ಬಗ್ಗೆ ತಮ್ಮದೇ ರೀತಿಯ ಚರ್ಚೆಯಲ್ಲಿ ಬಹುತೇಕ ಮುಖಂಡರು ತೊಡಗಿದ್ದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ.
