ಶಿವಮೊಗ್ಗ ಜಿಲ್ಲೆಪ್ರಮುಖ ಸುದ್ದಿಭದ್ರಾವತಿಶಿವಮೊಗ್ಗ

SHIMOGA| ಮುನ್ನೆಚ್ಚರಿಕೆ ಇಲ್ಲದೆ ಧರೆ ಕಡಿದು ರಸ್ತೆ ಕಾಮಗಾರಿ: ಶಿಮುಲ್‌ ಎದುರು ಕುಸಿದ ರಸ್ತೆ, ಸಂಚಾರಕ್ಕೆ ಸಂಚಕಾರ!

SHIMOGA| ಮುನ್ನೆಚ್ಚರಿಕೆ ಇಲ್ಲದೆ ಧರೆ ಕಡಿದು ರಸ್ತೆ ಕಾಮಗಾರಿ:
ಶಿಮುಲ್‌ ಎದುರು ಕುಸಿದ ರಸ್ತೆ, ಸಂಚಾರಕ್ಕೆ ಸಂಚಕಾರ!

ಶಿವಮೊಗ್ಗ: ಯಾವುದೇ ಮುನ್ನೆಚ್ಚರಿಕೆ ಪಾಲಿಸದೆ ಧರೆ ಕಡಿದು ಚತುಷ್ಪಥ ರಸ್ತೆ ಕಾಮಗಾರಿ ಮಾಡುತ್ತಿರುವ ಪರಿಣಾಮ ಸರ್ವಿಸ್‌ ರಸ್ತೆ ಕುಸಿದಿದ್ದು ಸಂಚಾರ ದುಸ್ತರವಾಗಿದೆ.


ಶಿವಮೊಗ್ಗ – ಬೆಂಗಳೂರು ಚತುಷ್ಪಥ ಹೆದ್ದಾರಿ ಕಾಮಗಾರಿ ಕುಂಟುತ್ತಾ ಸಾಗಿದ್ದು ಶಿವಮೊಗ್ಗ ಭದ್ರಾವತಿ ನಡುವಿನ ಶಿವಮೊಗ್ಗ ಹಾಲು ಒಕ್ಕೂಟ ಎದುರು ರಸ್ತೆಯನ್ನು ಸಮತಟ್ಟು ಮಾಡಲಾಗುತ್ತಿದ್ದು ತಾತ್ಕಾಲಿಕವಾಗಿ ಸರ್ವಿಸ್‌ ರಸ್ತೆಯಲ್ಲಿ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

15 ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಧರೆ ಕುಸಿತವಾಗಿದೆ. ಇಲ್ಲಿ ಎರಡು ಲಾರಿಗಳು ಹೋಗಿಬರುವಷ್ಟೇ ಸ್ಥಳವಕಾಶ ಇದ್ದು ಕೈಗಾರಿಕಾ ಪ್ರದೇಶ ಇರುವುದರಿಂದ ಪ್ರತಿ ದಿನ ಸಾವಿರಾರು ಭಾರೀ ವಾಹನಗಳು ಸಂಚರಿಸುತ್ತವೆ. ಮೊದಲೇ ಕಿರಿದಾಗಿ ಸಂಚಾರಕ್ಕೆ ದುಸ್ತರವಾಗಿದ್ದ ರಸ್ತೆ ಕುಸಿದಿರುವುದು ಮತ್ತಷ್ಟು ಸಮಸ್ಯೆ ತಂದಿಟ್ಟಿದೆ. ಶಿವಮೊಗ್ಗದಿಂದ ಬೆಂಗಳೂರು, ಮೈಸೂರು ಹೋಗುವ ಎಲ್ಲ ವಾಹನಗಳು ಇಲ್ಲಿಂದಲೇ ಹೋಗಬೇಕು. ಕೆಳಗಿನ ರಸ್ತೆ 20 ಅಡಿಗೂ ಅಧಿಕ ಆಳವಿದ್ದು ಯಮಾರಿದರೆ ಪ್ರಾಣಾಪಾಯವಾಗುವುದು ನಿಶ್ಚಿತ. ಮಳೆಗಾಲ ಹಿನ್ನೆಲೆ ರಸ್ತೆ ಕಾಮಗಾರಿ ಸ್ಥಗಿತಗೊಳಿಸಲಾಗಿದ್ದು ಕಾರ್ಮಿಕರೆಲ್ಲರೂ ರಜೆಯಲ್ಲಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಕ್ಷಣ ಸರಿಪಡಿಸಿದಿದ್ದರೆ ಸಮಸ್ಯೆ ಉಂಟಾಗುವುದು ನಿಶ್ಚಿತ.

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

ಬೆಂಗಳೂರು ಸಿನಿ ಉತ್ಸವದಲ್ಲಿ ಮಲೆನಾಡಿನ ಕಲರವ | ಗಾರ್ಗಿ ಕಾರೇಹಕ್ಲು ನಿರ್ದೇಶನದ ಹಕ್ಕಿಗಾಗಿ ಸಿನಿಮಾಕ್ಕೆ ಜೂರಿ ಅವಾರ್ಡ್|

ಬೆಂಗಳೂರು ಸಿನಿ ಉತ್ಸವದಲ್ಲಿ ಮಲೆನಾಡಿನ ಕಲರವ | ಗಾರ್ಗಿ ಕಾರೇಹಕ್ಲು ನಿರ್ದೇಶನದ ಹಕ್ಕಿಗಾಗಿ…

1 of 51

Leave A Reply

Your email address will not be published. Required fields are marked *