SHIVAMOGGA | HOSANAGARA RAIN EFFECTS |ಶಿವಮೊಗ್ಗ: ಜಿಲ್ಲೆಯ ಬಹುತೇಕ ಕಡೆ ಮಳೆ ಅಬ್ಬರ | ಕೋಡೂರು ಕುನ್ನೂರು ಗ್ರಾಮದಲ್ಲಿ ಮರ ಬಿದ್ದು ಮನೆಗೆ ಹಾನಿ

ಶಿವಮೊಗ್ಗ/ಹೊಸನಗರ : ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆ ಮಳೆಯಾಗಿದೆ. ಹೊಸನಗರ ತಾಲೂಕಿನ ಕೊಡೂರು ಕುನ್ನೂರು ಗ್ರಾಮದಲ್ಲಿ ಬಿರುಗಾಳಿ ಸಹಿತ ಮಳೆ ಅಬ್ಬರಕ್ಕೆ ಮರವೊಂದು ಬುಡಸಮೇತ ಬಿದ್ದು ಮನೆಯೊಂದು ಜಖಂಗೊಂಡಿದೆ.
ಭಾನುವಾರ ರಾತ್ರಿ ಸುರಿದ ಮಳೆಗೆ ಹೆಚ್.ಕುನ್ನೂರು ಗ್ರಾಮದ ತಿಮ್ನಪ್ಪ ಮನೆ ಪಕ್ಕದ ಮನೆ ಬಿದ್ದು ಮನೆ ಸಂಪೂರ್ಣ ಜಖಂಗೊಂಡಿದೆ. ಮೇಲ್ಭಾಗದಲ್ಲಿ ಹಾಕಿದ್ದ ಸಿಮೆಂಟ್ ಬಿದ್ದು ಪುಡಿಪುಡಿಯಾಗಿದ್ದು, ಮನೆಯಲ್ಲಿನ ಟಿವಿ, ಧವಸ ಧಾನ್ಯಗಳು ಮಳೆಗೆ ಹಾಳಾಗಿದೆ. ತಿಮ್ಮಪ್ಪ, ಆಶಾ ಕಾರ್ಯಕರ್ತೆ ವಿನುತ ದಂಪತಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಕೊಡೂರು ಗ್ರಾಪಂ ಅಧ್ಯಕ್ಷ ಉಮೇಶ್, ಸದಸ್ಯ ಮಂಜಪ್ಪ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ನಾಗರಾಜ್, ತಾಪಂ ಮಾಜಿ ಸದಸ್ಯ ಬಿ.ಜಿ.ಚಂದ್ರಮೌಳಿ ಕೊಡೂರು, ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಉಳಿದಂತೆ ಬಹುತೇಕ ಕಡೆ ಸಿಡಿಲು ಗುಡುಗಿನ ಆರ್ಭಟಕ್ಕೆ ವಿದ್ಯುತ್ ಸಂಪರ್ಕ ರಾತ್ರಿ ಸ್ಥಗಿತಗೊಂಡಿತ್ತು. ನಗರ ಹೋಬಳಿಯ ಮಾಣಿ, ಚಕ್ರಾ, ಯಡೂರು, ಮಾಸ್ತಿಕಟ್ಟೆ, ನಗರ, ಹೊಸನಗರ ಭಾಗದಲ್ಲಿ ಸಾಕಷ್ಟು ಮಳೆ ಸುರಿದಿದೆ.

Exit mobile version