SHIVAMOGGA SP MITHUN KUMAR SAID| ಆತಂಕ ಹುಟ್ಟಿಸಿದ ಪೆಟ್ಟಿಗೆಯಲ್ಲಿ ಇದ್ದದ್ದು ಅಡುಗೆ ಉಪ್ಪು | ಪ್ರಾಥಮಿಕ ತನಿಖೆಯ ಮಾಹಿತಿ ತಿಳಿಸಿದ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್

ಶಿವಮೊಗ್ಗ: ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾದ ಎರಡು ಪೆಟ್ಟಿಗೆಯಲ್ಲಿ ಕಂಡು ಬಂದಿರುವುದು ಅಡುಗೆ ಉಪ್ಪು ಎಂದು ಪ್ರಾಥಮಿಕ ತನಿಖೆಯ ಮಾಹಿತಿ ಆಧರಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ತಿಳಿಸಿದ್ದಾರೆ.

ನವೆಂಬರ್ 3 ರಂದು ತಂದಿಟ್ಟಿರುವ ಬಾಕ್ಸ್ ಗಳ ಬಗ್ಗೆ ತನಿಖೆ ನಡೆಯುತ್ತಿದೆ. ಪ್ರಾಥಮಿಕ ತನಿಖೆ ನಡೆಸಿದ ತಂಡ ಯಾವುದೇ ಸ್ಪೋಟಕ ವಸ್ತುಗಳು ಇಲ್ಲದಿರುವುದನ್ನ ಖಚಿತ ಪಡಿಸಿದೆ.
ಎರಡು ಪ್ರತ್ಯೇಕ ಸ್ಟೋಟದಲ್ಲಿ ಪೆಟ್ಟಿಗೆಗಳನ್ನು ತೆರೆಯಲಾಗಿದೆ. ಆಟೋ ಚಾಲಕರಿಂದ ಪೆಟ್ಟಿಗೆ ಪತ್ತೆಯಾದ ಮಾಹಿತಿ ತಿಳಿದು ಬಂದಿದೆ.
ಬಾಕ್ಸ್ ನಲ್ಲಿ ವೇಸ್ಟ್ ವಸ್ತುಗಳು ಕಂಡುಬಂದಿದ್ದು. ವಾಹನಗಳಲ್ಲಿ ಇಬ್ಬರು ವ್ಯಕ್ತಿಗಳು ಬರುತ್ತಿದ್ದು ಅವರಿಬ್ಬರನ್ನು ಕೂಡ ಪತ್ತೆಹಚ್ಚಲಾಗಿದೆ. ಆ ವ್ಯಕ್ತಿಗಳ ಕ್ರಿಮಿನಲ್ ಬ್ಯಾಕ್ ರೌಂಡ್ ತನಿಖೆ ನಡೆಯಲಿದೆ ಎಂದಿದ್ದಾರೆ.

Exit mobile version