SHIVAMOGGA |ಕೊಯಮುತ್ತೂರು ನ್ಯಾಷನಲ್ ಜೂನಿಯರ್ ಅಥ್ಲೆಟಿಕ್‍ಗೆ ಜಿಲ್ಲಾ ಕ್ರೀಡಾಪಟುಗಳು ಆಯ್ಕೆ

ಶಿವಮೊಗ್ಗ: ತಮಿಳುನಾಡಿನ ಕೊಯಮುತ್ತೂರಿನಲ್ಲಿ ನ.07 ರಿಂದ 10 ರವರೆಗೆ ನಡೆಯಲಿರುವ 38ನೇ ನ್ಯಾಷನಲ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಶಿವಮೊಗ್ಗ ಜಿಲ್ಲಾ ಕ್ರೀಡಾಶಾಲೆಯ ಕ್ರೀಡಾಪುಟಗಳಾದ ಸಿರಿ ಕೆ.ಜೆ.(ಟ್ರೈಯಾಥ್ಲಾನ್), ಅಮೂಲ್ಯ ಎಂ.ವಿ.(3ಕೆ.ವಾಕ್), ಶರತ್ ಕೆ.ಜೆ (ಕಿಡ್ಸ್ ಜಾವಲಿನ್), ಭೂಮಿಕಾ ಕೆ.ಎನ್. (ಟ್ರಿಪಲ್ ಜಂಪ್) ಹಾಗೂ ಸುದೀಪ್ (ಹೈಜಂಪ್) ಕ್ರೀಡೆಗಳಲ್ಲಿ ಭಾಗವಹಿಸಲಿದ್ದಾರೆ.

ಈ ಎಲ್ಲಾ ಕ್ರೀಡಾಪಟುಗಳು ತರಬೇತುದಾರರಾದ ಬಾಳಪ್ಪ ಮಾನೆ ಎಂಬುವವರ ಬಳಿ ದೈನಂದಿನ ತರಬೇತಿಯನ್ನು ಪಡೆಯುತ್ತಿದ್ದಾರೆ. ಈ ಕ್ರೀಡಪಟುಗಳಿಗೆ ಯವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥಸ್ವಾಮಿ ಮತ್ತು ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.

Exit mobile version