ಮೂಡುಗೊಪ್ಪದಲ್ಲಿ ಸಾಮೂಹಿಕ ಸೀಮಂತ ಸಂಭ್ರಮ | ತರಹೇವಾರಿ ತಿನಿಸುಗಳ ಘಮ..ಘಮ..

ಹೊಸನಗರ: ತಾಲೂಕಿನ ಮೂಡುಗೊಪ್ಪ ಗ್ರಾಪಂ ಸಭಾಭವನದಲ್ಲಿ ಸಂಭ್ರಮದ ಕ್ಷಣ. ಅದಕ್ಕೆ ಕಾರಣವಾಗಿದ್ದು ಸಾಮೂಹಿಕ ಸೀಮಂತ ಕಾರ್ಯಕ್ರಮ ಜೊತೆಗೆ ಮಹಿಳೆಯರೇ ತಯಾರಿಸಿ ತಂದಿದ್ದ ಪೌಷ್ಠಿಕಾಂಶ ಉಳ್ಳ ತರಹೇವಾರಿ ತಿನಿಸುಗಳ ಘಮಘಮ.

ಹೌದು ಶಿಶು ಅಭಿವೃದ್ಧಿ ಇಲಾಖೆ ಮತ್ತು ಮೂಡುಗೊಪ್ಪ ಗ್ರಾಪಂ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳ ಒಗ್ಗೂಡಿಕೆಯಲ್ಲಿ ಮೂಡಿಬಂದ ಕಾರ್ಯಕ್ರಮವಿದು.
ಐವರು ಗರ್ಭಿಣಿ ಮಹಿಳೆಯರಾದ ಶ್ರೀಮತಿ ರಕ್ಷಿತಾ, ಶ್ರೀಮತಿ ಕವಿತಾ, ಶ್ರೀಮತಿ ಚೈತ್ರಾ, ಶ್ರೀಮತಿ ವಂದನಾ, ಶ್ರೀಮತಿ ಸುಮಾ ಇವರಿಗೆ ಮಡಿಲು ತುಂಬಿ, ಅರಿಷಿಣ ಹಚ್ಚಿ ಸೀಮಂತ ನೆರವೇರಿಸಲಾಯಿತು.

ಈ ವೇಳೆ ಮಹಿಳೆಯರೇ ಮನೆಯಲ್ಲಿ ತಯಾರಿಸಿ ತಂದ ಪೌಷ್ಠಿಕ ಅಂಶಗಳುಳ್ಳ ನುಗ್ಗೆಸೊಪ್ಪಿನ ಚಟ್ನಿ, ಕ್ಯಾರೇಟ್ ಹಲ್ವಾ, ರಾಗಿ ಹಲ್ವಾ, ಡ್ರೈಪ್ರ್ಯೂಟ್ ಲಾಡು, ಹಾಲಿನ ರಸಗುಲ್ಲಾ, ಮೊಳಕೆ ಕಾಳಿನ ಪಲ್ಯ, ಬ್ರಾಹ್ಮಿ ಸೊಪ್ಪಿನ ಚಟ್ನಿ ಸೇರಿದಂತೆ ವಿವಿಧ ತಿನಿಸು, ಜ್ಯೂಸ್ ಗಳನ್ನು ಪ್ರದರ್ಶನ ಮಾಡಲಾಯಿತು. ತಿನಿಸು ತಯಾರಿಸಿದ ಮಹಿಳೆಯರಿಗೆ ಪ್ರೋತ್ಸಾಹದಾಯಕ ಬಹುಮಾನ ನೀಡಲಾಯಿತು.


ಗ್ರಾಪಂ ಅಧ್ಯಕ್ಷ ಕರುಣಾಕರ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭಕೋರಿದರು.

ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಸುಜಾತ, ಗ್ರಾಪಂ ಸದಸ್ಯರಾದ ವಿಶ್ವನಾಥ, ಜಾತಪ್ಪ, ನಿರ್ಮಲಾ, ಪಿಡಿಒ ರಾಮಚಂದ್ರ, ಚಿಕ್ಕಪೇಟೆ ಬಾಲಶಿಕ್ಷಾ ಸಮಿತಿ ಅಧ್ಯಕ್ಷೆ ಸವಿತಾ ರವಿಕಾಂತ, ಅರೋಡಿ ಅಧ್ಯಕ್ಷೆ ಸುಮತಿ, ದುಬಾರತಟ್ಟಿ ಅಧ್ಯಕ್ಷೆ ಫೌಜಿಯಾ, ಚಕ್ಕಾರು ಅಧ್ಯಕ್ಷೆ ಯಶೋಧ, ಅಂಗನವಾಡಿ ಕಾರ್ಯಕರ್ತೆಯರಾದ ಶ್ಯಾಮಲ ಚಿಕ್ಕಪೇಟೆ, ಶಶಿಕಲಾ ನಗರ, ಹೇಮಾವತಿ ದುಬಾರತಟ್ಟಿ, ಶ್ವೇತಾ ಚಕ್ಕಾರು, ಇಂದ್ರ ಬೈಸೆ, ಮಂಜುಳಾ ಶ್ರೀಧರಪುರ, ಅರ್ಪಿತಾ ಹಿಲ್ಕುಂಜಿ, ಅರ್ಪಿತಾ ಅರೋಡಿ, ವೇದಾವತಿ ಹೆಂಡೆಗದ್ದೆ, ರೂಪಶ್ರೀ ಸುಳುಗೋಡು, ಆರತಿ ಬಸವನಬ್ಯಾಣ, ಸುಮಿತಾ ನೂಲಿಗ್ಗೇರಿ ಪಾಲ್ಗೊಂಡಿದ್ದರು.
ರಕ್ಷಿತಾ ರಾಮಕೃಷ್ಣ ಪ್ರಾರ್ಥಿಸಿದರು.

Exit mobile version