
ಫೆ.11: ಶ್ರೀ ಶಿವಪ್ಪನಾಯಕ ಸೌಹಾರ್ದ ಸಹಕಾರಿ ಸಂಘಕ್ಕೆ ಶಾಸಕ ಆರಗ ಜ್ಞಾನೇಂದ್ರರಿಂದ ಚಾಲನೆ : ಅಧ್ಯಕ್ಷ ಎನ್.ವೈ.ಸುರೇಶ್
ಹೊಸನಗರ: ತಾಲೂಕಿನ ಚಿಕ್ಕಪೇಟೆ ನಗರದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಶ್ರೀ ಶಿವಪ್ಪ ನಾಯಕ ಸಹಕಾರ ಸಂಘಕ್ಕೆ ಮಾಜಿ ಗೃಹಸಚಿವ, ಶಾಸಕ ಆರಗ ಜ್ಞಾನೇಂದ್ರ ಫೆ.11 ರಂದು ಅಧಿಕೃತ ಚಾಲನೆ ನೀಡಲಿದ್ದಾರೆ ಎಂದು ಸಹಕಾರಿ ಸಂಘದ ಅಧ್ಯಕ್ಷ ಎನ್.ವೈ.ಸುರೇಶ್ ಹೇಳಿದರು.
ಭಾನುವಾರ ಬೆಳಿಗ್ಗೆ 11ಕ್ಕೆ ಕಚೇರಿಯ ಅಧಿಕೃತ ಉದ್ಘಾಟನೆ ನಡೆಯಲಿದ್ದು ಶ್ರೀ ಗಣಪತಿ ದೇವಸ್ಥಾನದ ಆವರಣದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.
ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ.ಶೇಷಗಿರಿ ಭಟ್, ಗುಲ್ಬರ್ಗಾದ ಜೆ.ಎಂ.ಕರುಣಾಕರ ಶೆಟ್ಟಿ, ರಾಮಪ್ಪಗೌಡ ಹೆರಗೊಡಿಗೆ, ಪ್ರಸನ್ನಕುಮಾರ್, ಗ್ರಾಪಂ ಅಧ್ಯಕ್ಷೆ ಸಂಗೀತಾ ಯು, ಉಪಾಧ್ಯಕ್ಷೆ ಸುಮನಾ ಭಾಸ್ಕರ್, ಗ್ರಾಪಂ ಸದಸ್ಯರು, ಸಂಘದ ನಿರ್ದೇಶಕರು ಭಾಗವಹಿಸಲಿರುವರು.


ಬೆಳಿಗ್ಗೆ 10 ರಿಂದ ಮತ್ತಿಮನೆ ಕೊಡಚಾದ್ರಿ ಕುಣಿತ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ, ನಂತರ ಸಭಾ ಕಾರ್ಯಕ್ರಮ, ರಾತ್ರಿ 8 ರಿಂದ ಕಲಾಚಂದನ ಬೀಜಾಡಿ, ಗೋಪಾಡಿ ಕಲಾತಂಡದಿಂದ ಹಾಸ್ಯಮಯ ನಾಟಕ ಲಾಸ್ಟ್ ವಾರ್ನಿಂಗ್ ಮೂಡಿ ಬರಲಿದೆ.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಕೆ.ವಿ.ಸುಬ್ರಹ್ಮಣ್ಯ, ನಿರ್ದೇಶಕರಾಗಿ ಎಸ್.ಎನ್.ದೇವರಾಜ್, ಪಿ.ಪ್ರಕಾಶ್, ಬಿ.ಇ.ಮಂಜುನಾಥ್, ಎಸ್.ಎಸ್.ಸುರೇಶ್, ಹೆಚ್.ಟಿ.ಚಂದ್ರ, ಬಿ.ಪುರುಶೋತ್ತಮ್, ಅಶ್ವಿನಿ ಎಸ್.ಪಾಟೀಲ್, ಕೆ.ಕವಿರಾಜ್, ಎನ್.ಸುಗುಣ, ಕೆ.ಸವಿತಾ, ಟಿ.ಜಿ.ಸೃಪಾ, ಕಾರ್ಯನಿರ್ವಾಹಣಾಧಿಕಾರಿ ಕೆ.ಎಸ್.ಶರಣ್ಯ ಕಾರ್ಯಕ್ರಮ ಯಶಸ್ವಿ ಗೊಳಿಸುವಂತೆ ಮನವಿ ಮಾಡಿದ್ದಾರೆ.
