ಕೊಡಚಾದ್ರಿ ಕ್ಷೇತ್ರ ದರ್ಶನ ಮಾಡಿದ ಶೃಂಗೇರಿ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ| ಶ್ರೀ ಶಂಕರಾಚಾರ್ಯ ಧ್ಯಾನಾಸಕ್ತರಾಗಿದ್ದ ಸರ್ವಜ್ಞ ಪೀಠ ದರ್ಶನ ನಮ್ಮ ಅಪೇಕ್ಷೆಯಾಗಿತ್ತು | ಶ್ರೀ ವಿಧುಶೇಖರ ಭಾರತೀ

ಕೊಡಚಾದ್ರಿ ಕ್ಷೇತ್ರ ದರ್ಶನ ಮಾಡಿದ ಶೃಂಗೇರಿ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ|
ಶ್ರೀ ಶಂಕರಾಚಾರ್ಯ ಧ್ಯಾನಾಸಕ್ತರಾಗಿದ್ದ ಸರ್ವಜ್ಞ ಪೀಠ ದರ್ಶನ ನಮ್ಮ ಅಪೇಕ್ಷೆಯಾಗಿತ್ತು | ಶ್ರೀ ವಿಧುಶೇಖರ ಭಾರತೀ

ಹೊಸನಗರ: ಶ್ರೀ ಶಂಕರಾಚಾರ್ಯರ ಶಿಷ್ಯಪರಂಪರೆಯ ನಾಲ್ಕು ಪ್ರಧಾನ ಮಠಗಳಲ್ಲಿ ಶೃಂಗೇರಿ ಮಠ ಕೂಡ ಒಂದಾಗಿದ್ದು, ಶ್ರೀ ಶಂಕರಾಚಾರ್ಯರಿಂದ ಮಹತ್ವ ಪಡೆದ ಕೊಡಚಾದ್ರಿ ದರ್ಶನ ಭಕ್ತರ ಅಪೇಕ್ಷೆಯಲ್ಲದೇ ನಮ್ಮ ಅಪೇಕ್ಷೆ ಕೂಡ ಆಗಿತ್ತು ಎಂದು ಶೃಂಗೇರಿ ಮಠದ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅಭಿಪ್ರಾಯಿಸಿದರು.

ಮಂಗಳವಾರ ಕೊಡಚಾದ್ರಿ ಗಿರಿಗೆ ಭೇಟಿ ನೀಡಿದ ಅವರು, ಶ್ರೀ ಪರ್ವತೇಶ್ವರ, ಶ್ರೀ ಹುಲಿರಾಯ ಸಿದ್ದೇಶ್ವರ ಸ್ವಾಮಿಯ ದರ್ಶನ ಪಡೆದ ಶ್ರೀಗಳು ಪೂಜೆ ನೆರವೇರಿಸಿದರು. ಬಳಿಕ ಸರ್ವಜ್ಞ ಪೀಠಕ್ಕೆ ತೆರಳಿ ವೀಕ್ಷಿಸಿದರು.

ಶ್ರೀ ಶಂಕರಾಚಾರ್ಯರು ಕೊಡಚಾದ್ರಿಗೆ ಬಂದು ದೇವಿಯನ್ನು ಸಾಕ್ಷಾತ್ಕರಿಸಿಕೊಂಡ ಪುರಾಣ ಪ್ರಸಿದ್ಧ ಸ್ಥಳವಿದು. ಶೃಂಗೇರಿ ಮಠ ಕೂಡ ಶ್ರೀಶಂಕರಾಚಾರ್ಯರ ಶಿಷ್ಯ ಪರಂಪರೆಗೆ ಸೇರಿದೆ. ಹಿಂದಿನ ಗುರುಗಳು ಕೂಡ ಕೊಡಚಾದ್ರಿ ಗಿರಿಗೆ ಭೇಟಿ ನೀಡಿದ್ದರು. ನಮಗು ಕೂಡ ಈ ಅಪೇಕ್ಷೆ ಇತ್ತು ಎಂದರು.

ಸನಾತನ ಭವ್ಯ ಪರಂಪರೆಗೆ ಶ್ರೀ ಶಂಕರಾಚಾರ್ಯರ ಕೊಡುಗೆ ಅನನ್ಯ. ಅವರು ಇಲ್ಲಿಯ ಸರ್ವಜ್ಞ ಪೀಠದಲ್ಲಿ ಧ್ಯಾನಾಸಕ್ತರಾಗಿದ್ದು ಮಹತ್ವ ಪಡೆದುಕೊಂಡಿದೆ ಎಂದರು.

ಗಿರಿಯ ದೇಗುಲಗಳ ದರ್ಶನ ಮಾಡಿದ ಬಳಿಕ ಸರ್ವಜ್ಞ ಪೀಠಕ್ಕೆ ಕಾಲ್ನಡಿಗೆಯಲ್ಲಿ ತೆರಳಿದ ಶ್ರೀ ಈ ವೇಳೆ ಗಣಪತಿ ಗುಹೆಗೂ ಭೇಟಿ ನೀಡಿದರು. ಕೊಡಚಾದ್ರಿಯ ಪ್ರಾಕೃತಿಕ ಶ್ರೀಮಂತಿಕೆಯನ್ನು ಕೆಲಕಾಲ ಸವಿದರು.

ಈ ಸಂದರ್ಭದಲ್ಲಿ ಭಕ್ತರು ಸ್ವಾಮೀಜಿಗಳ‌ ಪಾದಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಕೊಡಚಾದ್ರಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸಂಪದಮನೆ ಶಿವರಾಮಶೆಟ್ಟಿ, ಸದಸ್ಯರಾದ ಪವಿತ್ರ ಭಟ್, ಶರಾವತಿ, ಸುವರ್ಣ, ಗಿರೀಶ್, ಗಣಪತಿ, ರವಿ, ಅರ್ಚಕರು, ಸ್ಥಳೀಯ ಪ್ರಮುಖರು ಇದ್ದರು.

Exit mobile version