
Hosanagara| ರಾಜ್ಯ ಒಲಂಪಿಕ್ ಚಾಂಪಿಯನ್ ಶಿಫ್ ಗೆ ಆರು ವಿದ್ಯಾರ್ಥಿಗಳು ಆಯ್ಕೆ
ಹೊಸನಗರ: ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ರಾಜ್ಯ ಮಿನಿ ಒಲಂಪಿಕ್ ಚಾಂಪಿಯನ್ಶಿಪ್ ಗೆ ತಂಡಗಳ ಆಯ್ಕೆ ನಡೆದಿದ್ದು. ರಾಮಕೃಷ್ಣ ವಿದ್ಯಾಲಯ ರಿಪ್ಪನ್ ಪೇಟೆಯ ಐದು ವಿದ್ಯಾರ್ಥಿಗಳು ಹಾಗೂ ಪ್ರಾರ್ಥನಾ ರಾಮಕೃಷ್ಣ ವಿದ್ಯಾಲಯದ ಒಂದು ವಿದ್ಯಾರ್ಥಿಯು ತಂಡಗಳಿಗೆ ಆಯ್ಕೆಯಾಗಿರುತ್ತಾರೆ.
1. ಅನುಷ್ಕಾ 8 ನೇ ತರಗತಿ.
2.ಸೋನಾಲಿ 7ನೇ ತರಗತಿ
3.ಅವನ್ಯ 7ನೇ ತರಗತಿ
4.ಆಯುಶ್ರೀ 6ನೇ ತರಗತಿ.
5. ವಂದನ 9ನೇ ತರಗತಿ.
6. ನಿಶಾಂತ್ 8ನೇ ತರಗತಿ
ಈ ಎಲ್ಲ ವಿದ್ಯಾರ್ಥಿಗಳು 14 ವರ್ಷ ಒಳಗಿನ ರಾಜ್ಯ ಒಲಂಪಿಕ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಶ್ರೀ ರಾಮಕೃಷ್ಣ ವಿದ್ಯಾಲಯದ ದೈಹಿಕ ಶಿಕ್ಷಕರಾದ ವಿನಯ್. ಎಂ ಇವರನ್ನು. ಶಿವಮೊಗ್ಗ ತಂಡಕ್ಕೆ ತರಬೇತುದರನ್ನಾಗಿ ಆಯ್ಕೆ ಮಾಡಲಾಗಿದೆ.
ಶಿವಮೊಗ್ಗ ಜಿಲ್ಲಾ ಕಬ್ಬಡಿ ಅಸೋಸಿಯೇಷನ್, ಸಂಸ್ಥೆಯ ಸಂಸ್ಥಾಪಕರಾದ ದೇವರಾಜ್, ಹಾಗೂ ಶಾಲಾ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು. ಆಡಳಿತ ಮಂಡಳಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶುಭಕೋರಿದ್ದಾರೆ.