Homeತಾಲ್ಲೂಕುತೀರ್ಥಹಳ್ಳಿಪ್ರಮುಖ ಸುದ್ದಿಭದ್ರಾವತಿಶಿಕಾರಿಪುರ

ಹೊಸನಗರ: ಶಾಸಕ, ಸಂಸದರ ಅನುದಾನದಲ್ಲಿ ವಿವಿಧ ಅಭಿವೃದ್ಧಿ |ಸುಳುಗೋಡು ಶೂಲದಮಕ್ಕಿ ಸೇತುವೆಗೆ ರೂ.1 ಕೋಟಿ | ದಾಸಯ್ಯನ ಮನೆ ರಸ್ತೆಗೆ ರೂ. 15 ಲಕ್ಷ ಮೀಸಲಿಟ್ಟ ಶಾಸಕ ಆರಗ | ಬಸ್‌ನಿಲ್ದಾಣಕ್ಕೆ ಅನುದಾನ ನೀಡಿದ ಸಂಸದ ಬಿವೈಆರ್

ಹೊಸನಗರ: ಶಾಸಕ, ಸಂಸದರ ಅನುದಾನದಲ್ಲಿ ವಿವಿಧ ಅಭಿವೃದ್ಧಿ |ಸುಳುಗೋಡು ಶೂಲದಮಕ್ಕಿ ಸೇತುವೆಗೆ ರೂ.1 ಕೋಟಿ | ದಾಸಯ್ಯನ ಮನೆ ರಸ್ತೆಗೆ ರೂ. 15 ಲಕ್ಷ ಮೀಸಲಿಟ್ಟ ಶಾಸಕ ಆರಗ | ಬಸ್‌ನಿಲ್ದಾಣಕ್ಕೆ ಅನುದಾನ ನೀಡಿದ ಸಂಸದ ಬಿವೈಆರ್

ಹೊಸನಗರ| ತಾಲೂಕಿನ ಸುಳುಗೋಡು ಗ್ರಾಪಂ ವ್ಯಾಪ್ತಿಯ ಶೂಲದಮಕ್ಕಿ ಜನರ ಬಹುದಿನಗಳ ಬೇಡಿಕೆಯಾಗಿದ್ದ ಶೂಲದಮಕ್ಕಿ ಸೇತುವೆ ನಿರ್ಮಾಣಕ್ಕೆ ಶಾಸಕ ಆರಗ ಜ್ಞಾನೇಂದ್ರ ರೂ.1 ಕೋಟಿ ಅನುದಾನ ನೀಡಿದ್ದು, ದಿನನಿತ್ಯದ ಸಂಪರ್ಕಕ್ಕೆ ಅನುಕೂಲವಾಗಲಿದೆ ಎಂದು ಶಿವಮೊಗ್ಗ ಜಿಲ್ಲಾ ಯುವ ಮೋರ್ಚಾದ ಸಾಮಾಜಿಕ ಜಾಲತಾಣ ಪ್ರಮುಖ್ ನಿತಿನ್ ಯಡೂರು ತಿಳಿಸಿದ್ದಾರೆ.

ಈ ಸೇತುವೆ ನಿರ್ಮಾಣದಿಂದ ತಾಲೂಕು ಕೇಂದ್ರ ಹೊಸನಗರ , ಹೋಬಳಿ ಕೇಂದ್ರ ನಗರ, ರ‌್ಯಾವೆ, ಅಂಡಗದೊಡೂರು ಕಡೆಗೆ ಹೋಗಲು ಅತ್ಯಂತ ಅನುಕೂಲವಾಗಿದೆ. ಜನರ ದಿನನಿತ್ಯದ ಸಂಚಾರ ಸುಲಭಗೊಳ್ಳುತ್ತದೆ ಎಂದರು.
ಈ ಅಗತ್ಯವನ್ನು ಅರಿತು ಸುಲದಮಕ್ಕಿ ಸೇತುವೆಗೆ ₹1 ಕೋಟಿ, ಸುಳುಗೋಡು ಗ್ರಾಮ ದಾಸಯ್ಯನ ಮನೆ ರಸ್ತೆ ನಿರ್ಮಾಣಕ್ಕೆ ₹15 ಲಕ್ಷ ಶಾಸಕ ಆರಗ ಬಿಡುಗಡೆ ಗೊಳಿಸಿದ್ದಾರೆ. ಉಳುಕೊಪ್ಪ ಬಸ್ ನಿಲ್ದಾಣಕ್ಕೆ ಶಿವಮೊಗ್ಗ ಲೋಕಸಭಾ ಸದಸ್ಯರಾದ ಬಿ.ವೈ.ರಾಘವೇಂದ್ರ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದರು.

ಸುಳುಗೋಡು ಗ್ರಾಪಂ‌ ವ್ಯಾಪ್ತಿಉ ಜನರ ಸಂಕಷ್ಟ ಅರಿತು ಅನುದಾನ ನೀಡಿದ ಶಾಸಕರು ಮತ್ತು ಸಂಸದರಿಗೆ ತಾಪಂ‌ ಮಾಜಿ ಸದಸ್ಯ ಮಂಜುನಾಥ‌ ಬಂಕ್ರಿಬೀಡು, ನಿತಿನ್ ಯಡೂರು ಗ್ರಾಮಸ್ಥರ ಪರವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

1 of 51

Leave A Reply

Your email address will not be published. Required fields are marked *