
ತೀರ್ಥಹಳ್ಳಿ: ತಾಲ್ಲೂಕು ತ್ರಿಯಂಬಕಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳ ಪೋಷಣ್ ಅಭಿಯಾನ ಕಾರ್ಯಕ್ರಮವನ್ನು ಬಿಳಿವೆ ಹರಿಹರಪುರ ಅಂಗನವಾಡಿ ಕೇಂದ್ರದಲ್ಲಿ ನೆಡೆಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ತ್ರಿಯಂಬಕಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅನಿಲ್ ವಿಧಾತ, ಗರ್ಭಿಣಿ, ಬಾಣಂತಿ ಮಕ್ಕಳಲ್ಲಿರುವ ಅಪೌಷ್ಟಿಕತೆ ಹೋಗಲಾಡಿಸಲು ಸರ್ಕಾರ ಹಲವಾರು ಯೋಜನೆ ಗಳನ್ನು ರೂಪಿಸಿದೆ, ಅದರಲ್ಲಿ ಪೋಷಣ್ ಅಭಿಯಾನದ ಮೂಲಕ ಸಾಕಷ್ಟು ಕಾರ್ಯಕ್ರಮ ಗಳನ್ನು ಅಂಗನವಾಡಿ ಕೇಂದ್ರದಲ್ಲಿ ಈಗಾಗಲೇ ನೆಡೆಸುತ್ತ ಬಂದಿದ್ದು ಸ್ಥಳೀಯವಾಗಿ ಸಿಗುವ ಪದಾರ್ಥಗಳನ್ನು ಬಳಸಿ ಅರೋಗ್ಯ ವೃದ್ದಿಸಿಕೊಳ್ಳಲು ಸಲಹೆ ನೀಡಿದರು.
ಅಂಗನವಾಡಿ ಮೇಲ್ವಿಚಾರಕಿ ಶ್ರೀಮತಿ ಸುಮಲತಾ, ಈ ವರ್ಷದ ಪೋಷಣ್ ಮಾಸಚಾರಣೆ ಯಲ್ಲಿ ಮಹಿಳೆ ಮತ್ತು ಸ್ವಾಸ್ತ್ಯ, ಮಗುವಿನ ಶಿಕ್ಷಣ ದಲ್ಲಿ ಪೋಷಕರ ಪಾತ್ರ, ನೀರಿನ ಶೇಖರಣೆ ಮತ್ತು ಶುದ್ಧ ನೀರಿನ ಬಳಕೆ, ಸಂಪ್ರದಾಯ ಅಡುಗೆಗಳ ಬಗ್ಗೆ ಅರಿವು ಮೂಡಿಸುವುದಾಗಿದೆ ಎಂದು ಪೋಷಣ್ ಮಾಸಚಾರಣೆ ಬಗ್ಗೆ ಪ್ರಾಸ್ತವಿಕವಾಗಿ ಮಾತನಾಡಿದರು .
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಶಶಿರೇಖಾ, ಸ್ಥಳೀಯವಾಗಿ ಸಿಗುವ ಸೊಪ್ಪು ತರಕಾರಿ ಹಾಗೂ ನಿಮ್ಮ ಮನೆಗಳಲ್ಲೇ ಕೈತೋಟ ನಿರ್ಮಿಸಿಕೊಂಡು ಸೊಪ್ಪು ತರಕಾರಿ ಬೆಳೆದು ಅದನ್ನು ಸೇವನೆ ಮಾಡಬೇಕು. ಹಾಗೂ ಇತ್ತೀಚಿಗೆ ಸಾಮಾಜಿಕ ಪಿಡುಗುಗಳಾಗಿ ಕಾಡುತ್ತಿರುವ ಬಾಲ್ಯ ವಿವಾಹ, ಪೋಕ್ಸೋ ಅಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು ತಂದೆ ತಾಯಿಗಳು ಮಕ್ಕಳ ಬಗ್ಗೆ ಗಮನಹರಿಸಲು ತಿಳಿಸಿದರು.


ಈ ವೇಳೆ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ದ ಅಧ್ಯಕ್ಷರಾದ ಶ್ರೀ ಮೂರ್ತಿ ರವರು ನಿವೃತ್ತಿ ಯಾದ ಅಂಗನವಾಡಿ ಸಹಾಯಕಿ ಶ್ರೀಮತಿ ಗಂಗಮ್ಮ ರ ಸೇವೆಯನ್ನು ಶ್ಲಾಘಿಸಿದರು
ಕಾರ್ಯಕ್ರಮ ದಲ್ಲಿ ಪಂಚಾಯತ್ ಸದಸ್ಯರಾದ ದಿನೇಶ್, ಅರೋಗ್ಯ ಕಾರ್ಯಕರ್ತೆ ಶ್ರೀಮತಿ ಸರಸ್ವತಿ, ನಿವೃತ್ತಿ ಸಹಾಯಕಿ ಶ್ರೀಮತಿ ಗಂಗಮ್ಮ, 9 ಅಂಗನವಾಡಿ ಕಾರ್ಯಕರ್ತರು, ಊರಿನ ನಾಗರಿಕರು ಉಪಸ್ಥಿತರಿದ್ದರು.
ಕಾರ್ಯಕ್ರಮ ದಲ್ಲಿ ಪೌಸ್ಟಿಕಹಾರ ಪ್ರದರ್ಶನ ಸ್ಪರ್ಧೆ, ಮಕ್ಕಳಿಗೆ ಗ್ರಾಮಸ್ಥರಿಗೆ ಆಟೋಟ ಸ್ಪರ್ಧೆ, ನಿವೃತ್ತ ಸಹಾಯಕಿಯರಿಗೆ ಸನ್ಮಾನ ಕಾರ್ಯಕ್ರಮ, ಜಾಥಾ ನೆಡೆಸಲಾಯಿತು.
ಅಂಗನವಾಡಿ ಕಾರ್ಯಕರ್ತೆ ವನಿತಾ ಸ್ವಾಗತಿಸಿದರು. ಬಿಳಿವೆ ಹರಿಹರಪುರ ಶಾಲಾ ಮುಖ್ಯ ಶಿಕ್ಷಕರ ನಿರೂಪಿಸಿ ವಂದಿಸಿದರು
