THRINIVE| ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಹೆಚ್.ಡಿ ಮಂಜುನಾಥರಿಗೆ ಸನ್ಮಾನ| ಕಲ್ಲುವಿಡಿ ಅಬ್ಬಿಗಲ್ಲು ಗ್ರಾಮದಲ್ಲಿ ಹೃದಯಸ್ಪರ್ಶಿ ಕಾರ್ಯಕ್ರಮ

ಹೊಸನಗರ : ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲುವಿಡಿ ಅಬ್ಬಿಗಲ್ ನಲ್ಲಿ 2022-23 ನೇ ಸಾಲಿನ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ  ಮಂಜುನಾಥ್ ಹೆಚ್ ಡಿ ಯವರಿಗೆ ಕಲ್ಲುವಿಡಿ-ಅಬ್ಬಿಗಲ್ ಮತ್ತು ತೊಗರೆ ಗ್ರಾಮಸ್ಥರು ಅಭಿನಂದನಂದಿಸಿದರು.

ತಾಲೂಕಿನ ತ್ರಿಣಿವೆ ಗ್ರಾಪಂ ವ್ಯಾಪ್ತಿಯ  ಕಲ್ಲುವಿಡಿ ಅಬ್ಬಿಗಲ್ ಸರ್ಕಾರಿ ಹಮ್ಮಿಕೊಂಡಿದ್ದ ಹೃದಯಸ್ಪರ್ಶಿ ಕಾರ್ಯಕ್ರಮದಲ್ಲಿ ಕುಟುಂಬ ಸಮೇತರಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಕ ಹೆಚ್.ಡಿ ಮಂಜುನಾಥ್, ಪ್ರಶಸ್ತಿ ಮತ್ತು ಸನ್ಮಾನಗಳು ಮಾಡಿದ ಸೇವೆಗೆ ಸಾರ್ಥಕ ಭಾವ ತರಿಸುತ್ತದೆ. ಅಲ್ಲದೇ ಸೇವೆಯಲ್ಲಿ ಇನ್ನಷ್ಟು ಜವಾಬ್ದಾರಿ ಹೆಗಲೇರುತ್ತದೆ ಎಂದರು.

ಶಿಕ್ಷಣ ಸೇವೆಯ ಸಂದರ್ಭದಲ್ಲಿ ಸಹಕರಿಸಿದ ಶಿಕ್ಷಣ ಇಲಾಖೆ, ಶಿಕ್ಷಕರ ಸಂಘ, ಪ್ರೋತ್ಸಾಹಿಸಿದ ಪೋಷಕರಿಗೆ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಹೊಸನಗರ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ  ಕೃಷ್ಣಮೂರ್ತಿ ಹೆಚ್ ಆರ್, ತ್ರಿಣಿವೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ  ಕೃಷ್ಣಮೂರ್ತಿ, ಸದಸ್ಯರಾದ ಶ್ರೀಮತಿ ಲೀಲಾವತಿ, ಪಿಡಿಒ ರಂಜಿತಾ, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಹೆಚ್.ಆರ್ ಸುರೇಶ್, ಕಾರ್ಯದರ್ಶಿ ಮಹಮ್ಮದ್ ಅಲ್ತಾಫ್, ಖಜಾಂಚಿ ಪುಟ್ಟಸ್ವಾಮಿ, ಇ‌ಸಿಓ ಗಳಾದ ಕರಿಬಸಪ್ಪ ಮತ್ತು ದುಗ್ಗಪ್ಪ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವಣ್ಣಪ್ಪ, ಬ.ಮು.ಶಿ ಸುಶಿಲಮ್ಮ, ಮಲ್ಡಪ್ಪ , ಸೊನಲೆ ಮತ್ತು ರಾಮಚಂದ್ರಾಪುರ ಕ್ಲಸ್ಟರ್ ನ ಎಲ್ಲಾ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ (SDMC) ಅಧ್ಯಕ್ಷರಾದ  ನರಸಿಂಹ, ಸದಸ್ಯರು, ಪೋಷಕರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಸಹ ಶಿಕ್ಷಕಿಯಾದ ಶ್ರೀಮತಿ ಶಿಲ್ಪಾ ಸ್ವಾಗತಿಸಿದರು, ಚೈತ್ರ ವಂದಿಸಿದರು, ಮೇಘರಾಜ್ ಕಾರ್ಯಕ್ರಮ ನಿರೂಪಿಸಿದರು.

Exit mobile version