
ಉಡುಪಿ: ಪೆರ್ಡೂರು ಕುಲಾಲ ಭವನದಲ್ಲಿ ಪೆರ್ಡೂರು ಕುಲಾಲ ಸಂಘ ಆಯೋಜಿಸಿದ್ದ ಉಡುಪಿ ಜಿಲ್ಲಾಮಟ್ಟದ ಆಹ್ವಾನಿತ ತಂಡಗಳ ಕುಂಭ ಕಲಾಸಂಗಮ ಕಾರ್ಯಕ್ರಮದಲ್ಲಿ ಉತ್ತಮ ನಿರೂಪಕಿಯಾಗಿ ಹೊರಹೊಮ್ಮಿರುವ ಶ್ರೀಮತಿ ರೇಖಾ ಪ್ರಭಾಕರ್ ನಿರೂಪಣೆ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ಗಮನ ಸೆಳೆದಿದ್ದಾರೆ.
ಆ.28 ರಂದು ನಡೆದ ಕಾರ್ಯಕ್ರಮದಲ್ಲಿ ಡಾನ್ಸ್ ಕುಲಾಲ್, ಕುಲಾಲ್ ಐಡಲ್, ಮತ್ತು ಕುಲಾಲ್ ಮಾಸ್ಟರ್ ಆಫ್ ಸರ್ಮನಿ ಸೇರಿ ಮೂರು ವಿಭಾಗದಲ್ಲಿ ಸ್ಪರ್ಧೆ ಏರ್ಪಡಿಸಲಾಗಿತ್ತು.
ಟೀಂ ಕುಂದಾಪುರ ತಂಡದಿಂದ ಕಾರ್ಯಕ್ರಮ ನಿರೂಪಕಿಯಾಗಿ ಭಾಗವಹಿಸಿದ ಶ್ರೀಮತಿ ರೇಖಾ ಪ್ರಭಾಕರ್ ನಿರೂಪಕಿಯಾಗಿ ಭಾಗವಹಿಸಿ ಅತ್ಯುತ್ತಮ ನಿರೂಪಕಿ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಅಲ್ಲದೇ ಕುಂದಾಪ್ರ ಕನ್ನಡದ ಸೊಗಡಿನಲ್ಲಿ ಕಾರ್ಯಕ್ರಮ ನಿರೂಪಿಸಿದ್ದು ವಿಶೇಷವಾಗಿದ್ದು ಪ್ರೇಕ್ಷಕರ ಪ್ರಶಂಸೆಗೂ ಪಾತ್ರವಾಯಿತು.
ಶ್ರೀಮತಿ ರೇಖಾ ಪ್ರಭಾಕರ್ ಬಹುಮುಖ ಪ್ರತಿಭೆ. ಸರ್ಕಾರಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ ಇವರು ಪ್ರಸ್ತುತ ಹೊಸನಗರ ತಾಲೂಕು ಶಿಕ್ಷಣ ಇಲಾಖೆಯಲ್ಲಿ ಯಡೂರು ಕ್ಲಸ್ಟರ್ CRP ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಕಷ್ಟು ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡಿ ಗಮನ ಸೆಳೆದ ಇವರಿಗೆ ಇವರಿಗೆ ಕುಂದಾಪ್ರ ಕನ್ನಡದ ಸೊಗಡಿನ ಶೈಲಿಗೆ ಅತ್ತುತ್ತಮ ನಿರೂಪಕಿಯಾಗಿ ಪ್ರಶಸ್ತಿ ಲಭಿಸಿರುವುದು ಮತ್ತೊಂದು ಗರಿ ಮುಡಿಗೇರಿದಂತಾಗಿದೆ.
ಕುಂದಾಪ್ರ ಕನ್ನಡ ಶೈಲಿಗೆ ಸಿಕ್ಕ ಮನ್ನಣೆ ಖುಷಿ ತಂದಿದೆ
ಪೆರ್ಡೂರು ಕುಲಾಲ ಭವನದಲ್ಲಿ ವಿಶಿಷ್ಠ ಕಾರ್ಯಕ್ರಮ ಸಂಯೋಜಿದ್ದು ಗಮನಸೆಳೆಯುವಂತಿತ್ತು. ಸಾಕಷ್ಟು ಕಾರ್ಯಕ್ರಮದಲ್ಲಿ ನಿರೂಪಣೆ ಮಾಡಿದ್ದೇನೆ. ಈ ಬಾರಿ ತಾನು ತುಂಬಾ ಇಷ್ಟಪಡುವ ಕುಂದಾಪ್ರ ಕನ್ನಡ ಶೈಲಿಯಲ್ಲಿ ನಿರೂಪಣೆ ಮಾಡುವ ಅವಕಾಶ ಸಿಕ್ಕಿದ್ದೇ ರೋಮಾಂಚನ ತರಿಸಿತ್ತು. ಅದರಲ್ಲೂ ಅತ್ತುತ್ತಮ ನಿರೂಪಕಿಯಾಗಿ ಆಯ್ಕೆಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಲು ಪದಗಳು ಸಿಗುತ್ತಿಲ್ಲ. ಇದು ಬದುಕಿನ ಮರೆಯಲಾರದ ಕ್ಷಣ.
– ಶ್ರೀಮತಿ ರೇಖಾ ಪ್ರಭಾಕರ್, ನಿರೂಪಕಿ