
ಹೊಸನಗರ: ಅಂಡದೋದೂರು ಗ್ರಾಪಂ ವ್ಯಾಪ್ತಿಯ ಬೇಳೂರು ಗ್ರಾಮದ ಕಣ್ಕಿ ಸೇತುವೆ ಕೆಳಭಾಗ ಹೊಳೆಯಲ್ಲಿ ಕಾಡುಕೋಣದ ಮೃತದೇಹ ಮಂಗಳವಾರ ಪತ್ತೆಯಾಗಿದೆ.
ಕಾಡುಕೋಣದ ಮೃತದೇಹ ಕೊಳೆತ ಸ್ಥಿತಿಯಲ್ಲಿದ್ದು ಮೃತಪಟ್ಟು ಐದಾರು ದಿನಗಳು ಕಳೆದಿರಬಹುದು ಎಂದು ಅಂದಾಜಿಸಲಾಗಿದೆ.


ಸಾರ್ವಜನಿಕರ ಮಾಹಿತಿ ಮೇರೆಗೆ ಸ್ಥಳಕ್ಕೆ ದೌಡಾಯಿಸಿದ ನಗರ ವಲಯ ಅರಣ್ಯಾಧಿಕಾರಿಗಳು ಪರಿಶೀಲಿಸಿದರು.
ಕಾರ್ಯಾಚರಣೆ:
ಬೃಹತ್ ಗಾತ್ರದ ಕಾಡುಕೋಣದ ಮೃತ ದೇಹವನ್ನು ಕಣ್ಕಿ ಸೇತುವೆ ಮೇಲಿಂದ ಎತ್ತುವ ಕಾರ್ಯಾಚರಣೆ ನಡೆಸಲಾಯಿತು. ಸಿಬ್ಬಂದಿಗಳ ಜೊತೆಗೆ ಜೆಸಿಬಿ ಮತ್ತು ಹಗ್ಗವನ್ನು ಬಳಸಿ ಮೇಲೆತ್ತಲಾಯಿತು. ಕಾರ್ಯಾಚರಣೆಯನ್ನು ಸ್ಥಳೀಯರು ಕುತೂಹಲದಿಂದ ವೀಕ್ಷಿಸಿದರು.
ಬಳಿಕ ಮೃತದೇಹವನ್ನು ನಗರ ಭಾಗಕ್ಕೆ ತಂದು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮಹಜರು ನಡೆಸಿ ಇಲಾಖೆಯ ನಿಯಮಾವಳಿಯಂತೆ ದಫನ್ ಮಾಡಲಾಯಿತು.
ಈ ವೇಳೆ ಹೊಸನಗರ ಎಸಿಎಫ್ ಕೆ.ಜಿ.ಪ್ರಕಾಶ್, ನಗರ ವಲಯ ಅರಣ್ಯಾಧಿಕಾರಿ ಸಂಜಯ್, ಉಪವಲಯ ಅರಣ್ಯಾಧಿಕಾರಿ ಸತೀಶ್, ಫಾರೆಸ್ಟ್ ಗಾರ್ಡ್ ರಾಘವೇಂದ್ರ ಪಾಲ್ಗೊಂಡಿದ್ದರು.
VIDEO | ಕಣ್ಕಿ ಹೊಳೆಯಲ್ಲಿ ಪತ್ತೆಯಾದ ಕಾಡುಕೋಣದ ಮೃತದೇಹವನ್ನು ಮೇಲೆತ್ತಲು ಭರ್ಜರಿ ಕಾರ್ಯಾಚರಣೆಯ ವೀಡಿಯೋ ನೋಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
