
ಶ್ರೀಮಂತಿಕೆಯ ಹಿನ್ನೆಲೆ ಇಲ್ಲದೇ 10ನೇ ಚುನಾವಣೆ ಎದುರಿಸುತ್ತಿದ್ದೇನೆ: ಆರಗ ಜ್ಞಾನೇಂದ್ರ
ಹೊಸನಗರ: ಬಡತನದಿಂದ ಬಂದವನು ನಾನು. ಯಾವುದೇ ಶ್ರೀಮಂತಿಕೆ ಕುಟುಂಬ ಇರಲಿಲ್ಲ. ಜನಸಾಮಾನ್ಯರೇ ನೆಂಟರು, ಕಾರ್ಯಕರ್ತರೇ ಬಂಧುಗಳು ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಯಡೂರು ಸುಳುಗೋಡು ಭಾಗದಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು, ಯಾವುದೇ ಶ್ರೀಮಂತಿಕೆಯ ಹಿನ್ನೆಲೆ ಇಲ್ಲದಿದ್ದರು 10 ನೇ ಚುನಾವಣೆ ಎದುರಿಸುತ್ತಿದ್ದೇನೆ ಎಂದರು.


ಆರಂಭದಲ್ಲಿ ಚುನಾವಣೆ ಸಭೆ ನಡೆಸುವಾಗ ಇಲ್ಲಿಯ ದೇವಸ್ಥಾನದ ಅವರಣ ಸಾಕಾಗಿತ್ತು. ಆದರೆ ಈಗ ಆ ಆವರಣ ಸಾಕಾಗುತ್ತಿಲ್ಲ. ನೂರಾರು ಸಂಖ್ಯೆಯ ಕಾರ್ಯಕರ್ತರ ನಡುವೆ ಸಭೆ ನಡೆಸಬೇಕಾಗಿದೆ ಇದು ಕಾರ್ಯಕರ್ತರ ಸಂಘಟನೆಯಿಂದ ಸಾಧ್ಯವಾಯ್ತು ಎಂದರು.
ಅಧಿಕಾರದವಧಿಯಲ್ಲಿ ಕ್ಷೇತ್ರಕ್ಕೆ ಕೆಟ್ಟ ಹೆಸರು ತರಲಿಲ್ಲ. ಇಲ್ಲಿಯವರೆಗೆ ತಂದಿರದ ಅನುದಾನವನ್ನು ಈಬಾರಿ ತಂದಿದ್ದೇನೆ ಎಂದರು.
ಸಭೆಯಲ್ಲಿ ನಗರ ಹೋಬಳಿ ಬಗರಹುಕುಂ ಅಧ್ಯಕ್ಷ ಬಂಕ್ರಿಬೀಡು ಮಂಜುನಾಥ್, ಬಸವರಾಜ ಹೊದಲ, ಯಡೂರು ಸುಳುಗೋಡು ಭಾಗದ ಪ್ರಮುಖರು ಹಾಜರಿದ್ದರು.
