Homeತಾಲ್ಲೂಕುಪ್ರಮುಖ ಸುದ್ದಿಭದ್ರಾವತಿಶಿವಮೊಗ್ಗಶಿವಮೊಗ್ಗ ಜಿಲ್ಲೆ

ಯಶವಂತಪುರ-ತಾಳಗುಪ್ಪ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ ರೈಲು ಸಂಚಾರ

ಯಶವಂತಪುರ-ತಾಳಗುಪ್ಪ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ ರೈಲು ಸಂಚಾರ

ಶಿವಮೊಗ್ಗ:ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಯಶವಂತಪುರ ಮತ್ತು ತಾಳಗುಪ್ಪ ನಡುವೆ (ರೈಲು ಸಂಖ್ಯೆ 06587/06588) ಒಂದು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ ರೈಲನ್ನು ಓಡಿಸಲು ನಿರ್ಧರಿಸಲಾಗಿದೆ.

ರೈಲು ಸಂಖ್ಯೆ 06587 ಯಶವಂತಪುರ – ತಾಳಗುಪ್ಪ ಎಕ್ಸ್ ಪ್ರೆಸ್ ವಿಶೇಷ ರೈಲು ಜುಲೈ 25, 2025 ರಂದು ರಾತ್ರಿ 10:30 ಗಂಟೆಗೆ ಯಶವಂತಪುರದಿಂದ ಹೊರಟು, ಮರುದಿನ ಬೆಳಿಗ್ಗೆ 04:15 ಗಂಟೆಗೆ ತಾಳಗುಪ್ಪ ತಲುಪಲಿದೆ. ಮಾರ್ಗಮಧ್ಯೆ, ಈ ರೈಲು ತುಮಕೂರು (11:18/11:20 PM), ತಿಪಟೂರು (00:13/00:15 AM), ಅರಸೀಕೆರೆ (00:33/00:38 AM), ಬೀರೂರು (01:13/01:15 AM), ತರೀಕೆರೆ (01:43/01:45 AM), ಭದ್ರಾವತಿ (02:00/02:02 AM), ಶಿವಮೊಗ್ಗ ಟೌನ್ (02:20/02:25 AM), ಆನಂದಪುರಂ (03:10/03:12 AM) ಮತ್ತು ಸಾಗರ ಜಂಬಗಾರು (03:35/03:37 AM) ನಿಲ್ದಾಣಗಳಲ್ಲಿ ಆಗಮಿಸಿ, ನಿರ್ಗಮಿಸಲಿದೆ.

ವಾಪಸ್ ಬರುವಾಗ, ರೈಲು ಸಂಖ್ಯೆ 06588 ತಾಳಗುಪ್ಪ–ಯಶವಂತಪುರ ಎಕ್ಸ್ ಪ್ರೆಸ್ ವಿಶೇಷ ರೈಲು ಜುಲೈ 26, 2025 ರಂದು ಬೆಳಿಗ್ಗೆ 08:15 ಗಂಟೆಗೆ ತಾಳಗುಪ್ಪದಿಂದ ಹೊರಟು, ಅದೇ ದಿನ ಸಂಜೆ 04:50 ಗಂಟೆಗೆ ಯಶವಂತಪುರ ತಲುಪಲಿದೆ. ಮಾರ್ಗಮಧ್ಯೆ, ಈ ರೈಲು ಸಾಗರ ಜಂಬಗಾರು (08:30/08:32 AM), ಆನಂದಪುರಂ (09:00/09:02 AM), ಶಿವಮೊಗ್ಗ ಟೌನ್ (09:45/09:50 AM), ಭದ್ರಾವತಿ (10:15/10:17 AM), ತರೀಕೆರೆ (10:30/10:32 AM), ಬೀರೂರು (11:00/11:02 AM), ಅರಸೀಕೆರೆ (12:00/12:10 PM), ತಿಪಟೂರು (12:28/12:30 PM) ಮತ್ತು ತುಮಕೂರು (03:18/03:20 PM) ನಿಲ್ದಾಣಗಳಲ್ಲಿ ಆಗಮಿಸಿ, ನಿರ್ಗಮಿಸಲಿದೆ.

ಈ ರೈಲು ಒಟ್ಟು 20 ಬೋಗಿಗಳನ್ನು ಒಳಗೊಂಡಿರಲಿದೆ. ಇದರಲ್ಲಿ 01 ಎಸಿ ಟು ಟೈರ್, 02 ಎಸಿ ತ್ರಿ ಟೈರ್, 10 ಸ್ಲೀಪರ್ ಕ್ಲಾಸ್, 05 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 02 ಸೆಕೆಂಡ್ ಕ್ಲಾಸ್ ಲಗೇಜ್-ಕಮ್-ಬ್ರೇಕ್ ವ್ಯಾನ್ ಬೋಗಿಗಳು ಇರಲಿವೆ.

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

ಅಡಿಕೆ ಔಷಧಿ ಹೊಡೆಯುವ ವೇಳೆ ಮರದಿಂದ ಬಿದ್ದ ವ್ಯಕ್ತಿ ಸಾ*ವು!  ಕರಿಮನೆ ಗ್ರಾಪಂ ಕಿಳಂದೂರು‌ ಗ್ರಾಮದಲ್ಲಿ ಘಟನೆ

ಅಡಿಕೆ ಔಷಧಿ ಹೊಡೆಯುವ ವೇಳೆ ಮರದಿಂದ ಬಿದ್ದ ವ್ಯಕ್ತಿ ಸಾ*ವು!  ಕರಿಮನೆ ಗ್ರಾಪಂ ಕಿಳಂದೂರು‌…

1 of 48

Leave A Reply

Your email address will not be published. Required fields are marked *