ಕಿಲಗಾರು ಬಳಿ ಹಾಡುಹಗಲೇ ಕಳ್ಳತನ
ಹೊಸನಗರ: ಹಾಡುಹಗಲೇ ಮನೆಗೆ ನುಗ್ಗಿ ಆಭರಣ ಕಳ್ಳತನ ಮಾಡಿದ ಘಟನೆ ತಾಲೂಕಿನ ಮಾಸ್ತಿಕಟ್ಟೆ ಸಮೀಪ ಕಿಲಗಾರು ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಕಿಲಗಾರು ವಾಸಿ, ಮಾಸ್ತಿಕಟ್ಟೆ ಕೆಪಿಸಿಯ ಸೆಕ್ಯೂರಿಟಿ ಗಾರ್ಡ್ ವಿಶ್ವನಾಥ ಎಂಬುವವರ ಮನೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದೆ.
ಮಧ್ಯಾಹ್ನದ ಹೊತ್ತಿಗೆ ಕಳ್ಳತನ ನಡೆದಿದ್ದು ಬೆಡ್ ರೂಂ ಬೀರುವಿನಲ್ಲಿದ್ದ ಬಂಗಾರದ ಸರ, ಬೆಂಡೊಲೆ, ಕೈಉಂಗುರ ಸೇರಿದಂತೆ ಒಟ್ಟು 24 ಗ್ರಾಂ ತೂಕದ ರೂ 72 ಸಾವಿರ ಮೌಲ್ಯದ ಬಂಗಾರವನ್ನು ಕಳ್ಳತನ ಮಾಡಲಾಗಿದೆ.
ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪಿಎಸ್ಐ ನಾಗರಾಜ್ ಸ್ಥಳ ಮಹಜರು ನಡೆಸಿದ್ದಾರೆ.ಕಿಲಗಾರು ಬಳಿ ಹಾಡುಹಗಲೇ ಕಳ್ಳತನ
ಹೊಸನಗರ: ಹಾಡುಹಗಲೇ ಮನೆಗೆ ನುಗ್ಗಿ ಆಭರಣ ಕಳ್ಳತನ ಮಾಡಿದ ಘಟನೆ ತಾಲೂಕಿನ ಮಾಸ್ತಿಕಟ್ಟೆ ಸಮೀಪ ಕಿಲಗಾರು ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಕಿಲಗಾರು ವಾಸಿ, ಮಾಸ್ತಿಕಟ್ಟೆ ಕೆಪಿಸಿಯ ಸೆಕ್ಯೂರಿಟಿ ಗಾರ್ಡ್ ವಿಶ್ವನಾಥ ಎಂಬುವವರ ಮನೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದೆ.
ಮಧ್ಯಾಹ್ನದ ಹೊತ್ತಿಗೆ ಕಳ್ಳತನ ನಡೆದಿದ್ದು ಬೆಡ್ ರೂಂ ಬೀರುವಿನಲ್ಲಿದ್ದ ಬಂಗಾರದ ಸರ, ಬೆಂಡೊಲೆ, ಕೈಉಂಗುರ ಸೇರಿದಂತೆ ಒಟ್ಟು 24 ಗ್ರಾಂ ತೂಕದ ರೂ 72 ಸಾವಿರ ಮೌಲ್ಯದ ಬಂಗಾರವನ್ನು ಕಳ್ಳತನ ಮಾಡಲಾಗಿದೆ.
ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪಿಎಸ್ಐ ನಾಗರಾಜ್ ಸ್ಥಳ ಮಹಜರು ನಡೆಸಿದ್ದಾರೆ.