ತೋಟದ ಬಾವಿಗೆ ಕಾಲುಜಾರಿ ಬಿದ್ದು ವೃದ್ಧನ ಸಾವು

ದರ್ಗಾ ಹೆರಗೊಡಿಗೆ ಬಳಿ ಬೈಕ್ ಮೇಲೆ ಎರಗಿದ ಚಿರತೆ: ಕೂದಲೆಳೆ ಅಂತರದಲ್ಲಿ‌ ಬಚಾವಾದ ಬೈಕ್ ಸವಾರ

ದರ್ಗಾ ಹೆರಗೊಡಿಗೆ ಬಳಿ ಬೈಕ್ ಮೇಲೆ ಎರಗಿದ ಚಿರತೆ: ಕೂದಲೆಳೆ ಅಂತರದಲ್ಲಿ‌ ಬಚಾವಾದ ಬೈಕ್ ಸವಾರ

ಹೊಸನಗರ ತಾಲೂಕು ಪುರಪ್ಪೇಮನೆ ಸಮೀಪ ಕೃಷಿ ಕಾರ್ಯಕ್ಕೆ ತೆರಳುವಾಗ ತೋಟದ ಬಾವಿಗೆ ಬಿದ್ದು ವೃದ್ಧನೋರ್ವ ಮೃತಪಟ್ಟಿದ್ದಾನೆ

ತೋಟದ ಬಾವಿಗೆ ಕಾಲುಜಾರಿ ಬಿದ್ದು ಸಾವು
ಹೊಸನಗರ: ತಾಲೂಕಿನ ಪುರಪ್ಪೆಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದೊಡ್ಡಬಿಳಗೋಡು ಗ್ರಾಮದ ಜಿ.ಕೆ.ಗಣಪತಿ (74) ಕೃಷಿ ಕೆಲಸದ ನಿಮಿತ್ತ ತೋಟಕ್ಕೆ ಹೋಗಿದ್ದಾಗ ಕಾಲುಜಾರಿ ತೋಟದ ರಿಂಗ್ ಬಾವಿಗೆ ಬಿದ್ದು ಸಾವನ್ನಪ್ಪಿದ್ದಾರೆ.
ಪುರಪ್ಪೆಮನೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಗಿರಿಜಮ್ಮ ರವರ ಪತಿಯಾದ ಜಿ ಕೆ ಗಣಪತಿ ರವರು ಬೆಳಿಗ್ಗೆ 9.30 ರ ಸಮಯದಲ್ಲಿ ಕೃಷಿ ಕೆಲಸದ ನಿಮಿತ್ತ ತೋಟಕ್ಕೆ ಕೆಲಸಕ್ಕೆ ಹೋದಾಗ ಕಾಲು ಜಾರಿ ರಿಂಗ್ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಅಂಬಿಕಾ ರವರು ಭೇಟಿ ನೀಡಿದ್ದು,ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಾಗರದ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಹೊಸನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ

Exit mobile version