
ಒಣಗಿದ ಬಟ್ಟೆ ತೆಗೆಯಲು ಹೋದಾಗ ವಿದ್ಯುತ್ ಸ್ಪರ್ಶಿಸಿ ದಂಪತಿ ಸಾವು!
ಶಿವಮೊಗ್ಗ: ಒಣಗಿದ ಬಟ್ಟೆ ತೆಗೆಯಲು ಹೋದಾಗ ವಿದ್ಯುತ್ ಸ್ಪರ್ಶಿಸಿ ದಂಪತಿ ಸಾವು ಕಂಡ ಘಟನೆ ಶಿವಮೊಗ್ಗದ ಸೊರಬ ತಾಲೂಕು ಕಪ್ಪಗಳಲೆ ಗ್ರಾಮದಲ್ಲಿ ರಾತ್ರಿ ನಡೆದಿದೆ.
ಒಣಗಿ ಹಾಕಿದ್ದ ಬಟ್ಟೆ ತೆಗೆಯಲು ಹೋದಾಗ ದುರ್ಘಟನೆ ನಡೆದಿದೆ. ಕೃಷ್ಣಪ್ಪ( 53) ಹಾಗೂ ವಿನೋದಾ( 43) ಮೃತಪಟ್ಟ ದಂಪತಿ.
ಮನೆಯ ಬಳಿ ತಂತಿಯ ಮೇಲೆ ಬಟ್ಟೆ ಒಣ ಹಾಕಿದ್ದ ವಿನೋದಮ್ಮ ರಾತ್ರಿ ವೇಳೆ ತೆಗೆಯಲು ಹೋಗಿದ್ದರು. ಆದರೆ ಬಟ್ಟೆ ಒಣಗಿಸಿದ ತಂತಿ ಮೇಲೆ ವಿದ್ಯುತ್ ತಂತಿ ಹರಿದು ಬಿದ್ದಿತ್ತು. ಇದನ್ನು ಗಮನಿಸದ ವಿನೋದಮ್ಮ ಬಟ್ಟೆ ತೆಗೆಯುವಾಗ ಶಾಕ್ ಹೊಡೆದಿದೆ. ಶಾಕ್ ಗೆ ತುತ್ತಾಗಿ ವಿನೋದಮ್ಮ ಕೂಗಿಕೊಂಡಾಗ ಪತಿ ಕೃಷ್ಣಪ್ಪ ಓಡಿ ಬಂದು ರಕ್ಷಿಸಲು ಮುಂದಾಗಿದ್ದಾರೆ. ಈ ವೇಳೆ ಕೃಷ್ಣಪ್ಪ ಕೂಡ ಶಾಕ್ ಗೆ ತುತ್ತಾಗಿ ಗಂಡ ಹೆಂಡತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸೊರಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.