
ಹೊಸನಗರ: ಅಡಿಕೆ ಎಲೆಚುಕ್ಕಿ ರೋಗ ಬಾಧೆಗೆ ಬೆದರಿ ಆತ್ಮಹತ್ಯೆಗೆ ಶರಣಾದ ಕಿಳಂದೂರು ಗ್ರಾಮದ ಮೃತ ಕೃಷ್ಣಪ್ಪಗೌಡ ಮನೆಗೆ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.
ಕೃಷಿ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಪುಟ್ಟನಾಯ್ಕ್, ಕಿರಿಯ ಸಹಾಯಕ ನಿರ್ದೇಶಕ ಕರಿಬಸವ ನಾಯ್ಕ್ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಬಳಿಕ ಗ್ರಾಮಸ್ಥರ ಸಮಕ್ಷಮದಲ್ಲಿ ತೋಟಗಾರಿಕಾ ಬೆಳೆಯ ಮಹಜರು ನಡೆಸಿದರು.
ತೋಟಗಾರಿಕಾ ಅಧಿಕಾರಿ ಪುಟ್ಟ ನಾಯ್ಕ ಮಾತನಾಡಿ, ಅಡಿಕೆ ಎಲೆಚುಕ್ಕೆ ರೋಗದ ಆತಂಕ ಬೇಡ. ಎಲ್ಕವನ್ನು ಸಮರ್ಥವಾಗಿ ಎದುರಿಸಬೇಕು ನಾವು ನಿಮ್ಮೊಂದಿಗಿದ್ದೇವೆ ಎಂದು ಧೈರ್ಯ ತುಂಬುವ ಪ್ರಯತ್ನ ಮಾಡಿದರು. ವರದಿಯನ್ನು ಕೂಡಲೇ ಸರ್ಕಾರಕ್ಕೆ ಒಪ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಪ್ರಮುಖರಾದ ಯೋಗೇಂದ್ರ, ದೇವೇಂದ್ರ, ಮೃತರ ಮಕ್ಕಳಾದ ಸತೀಶ್, ಅರುಣ್ ಮತ್ತು ಕುಟುಂಬಸ್ಥರು, ಸ್ಥಳೀಯರು ಇದ್ದರು.