ಬಾಳೆಬರೆ ಅಪಘಾತ | ಕ್ಯಾಂಟರ್ ಪಲ್ಟಿ | ಧರ್ಮದರ್ಶಿ ಬೊಲೆರೋ ಜಖಂ | ದೇಗುಲಕ್ಕೆ ಹಾನಿ

ಬಾಳೆಬರೆ ಅಪಘಾತ | ಕ್ಯಾಂಟರ್ ಪಲ್ಟಿ | ಧರ್ಮದರ್ಶಿ ಬೊಲೆರೋ ಜಖಂ | ದೇಗುಲಕ್ಕೆ ಹಾನಿ

ಹೊಸನಗರ: ಚಾಲಕನ ನಿಯಂತ್ರಣ ತಪ್ಪಿ ಕ್ಯಾಂಟರ್ ಪಲ್ಟಿ ಹೊಡೆದ ಪರಿಣಾಮ, ಧರ್ಮದರ್ಶಿಗಳ ವಾಹನ ಜಖಂಗೊಂಡು ದೇವಸ್ಥಾನದ ಕಾಂಪೌಂಡ್ ಹಾನಿಯಾದ ಘಟನೆ ಹುಲಿಕಲ್ ಘಾಟಿ, ಬಾಳೆಬರೆಯಲ್ಲಿ ಬುಧವಾರ ರಾತ್ರಿ ನಡೆದಿದೆ.

ರಾತ್ರಿ 8 ಗಂಟೆಯ ಸುಮಾರಿಗೆ ಶಿವಮೊಗ್ಗ ಕಡೆಯಿಂದ ಬರುತ್ತಿದ್ದ ಕ್ಯಾಂಟರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ದೇವಸ್ಥಾನದ ಕಾಂಪೌಂಡ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಕಾಂಪೌಂಡ್ ಪಕ್ಕದಲ್ಲಿ ನಿಲ್ಲಿಸಿದ್ದ ಧರ್ಮದರ್ಶಿ ಮೋಹನ್ ನಂಬಿಯಾರ್ ರವರ ಬೊಲೆರೋ ವಾಹನ ಜಖಂಗೊಂಡಿದೆ. ಅಲ್ಲದೇ ಕಾಂಪೌಂಡ್ ಹಾನಿಯಾಗಿದೆ. ಕ್ಯಾಂಟರ್ ಚಾಲಕ ಪದ್ದಿಲೇಟಿ ಬಿನ್ ನಾರಾಯಣಪ್ಪ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆ ನಿವಾಸಿಯಾಗಿದ್ದು ಆತನ ಎಡಗಾಲು, ಎಡಕೈಗೆ ಪೆಟ್ಟಾಗಿದೆ.

ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

Exit mobile version