
ಬೇಳೂರು ಗ್ರಾಮಸ್ಥರ ಪಟ್ಟಿಗೆ ಮಣಿದ BEO | ಸರ್ಕಾರಿ ಶಾಲೆಗೆ ದೌಡಾಯಿಸಿದ BEO ಕೃಷ್ಣಮೂರ್ತಿ| ತುರ್ತು ಪರಿಹಾರ ಒಪ್ಪಿ ಪ್ರತಿಭಟನೆ ಕೈಬಿಟ್ಟ ಪೋಷಕರು
ಹೊಸನಗರ: ಶಿಕ್ಷಕರ ಬೇಕಾಬಿಟ್ಟಿ ವರ್ಗಾವಣೆ, ನೇಮಕ ಸಂಬಂಧಿಸಿ BEO ಖುದ್ದು ಬರಲು ಆಗ್ರಹಿಸಿ ಕಣ್ಕಿ ಬೇಳೂರು ಗ್ರಾಮಸ್ಥರು ಪ್ರತಿಭಟನಾ ಪಟ್ಟಿಗೆ ಮಣಿದು BEO ಹೆಚ್.ಆರ್.ಕೃಷ್ಷಮೂರ್ತಿ ಸ್ಥಳಕ್ಕೆ ದೌಡಾಯಿಸಿದ್ದಾರೆ.
ಬೇಳೂರು ಸರ್ಕಾರಿ ಪ್ರಾಥಮಿಕ ಶಾಲಾ ಆವರಣಕ್ಕೆ ಬಿಇಒ ಬರುತ್ತಿದ್ದಂತೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು. ಪೋಷಕರಿಂದ ಅಹವಾಲು ಸ್ವೀಕರಿಸಿ, ಇಲಾಖೆಯ ಅನಿವಾರ್ಯತ ಬಗ್ಗೆ ಸಮಜಾಯಿಷಿ ನೀಡಿದರು.
ಗ್ರಾಮಸ್ಥರ ಪಟ್ಟಿಗೆ ಮಣಿದು ಬಿಇಒ ಹೆಚ್.ಆರ್.ಕೃಷ್ಣಮೂರ್ತಿ ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿದರು. ಹೊಸದಾಗಿ ಬಂದಿರುವ ಶಿಕ್ಷಕ ಮಂಜುನಾಥರನ್ನು ಉಳಿಸಿಕೊಳ್ಳುವುದು ಮತ್ತು ಸಮಸ್ಯೆ ಸುಧಾರಿಸುವ ತನಕ ನಗರ ಬಾಲಕಯರ ಶಾಲೆಯ ಮಂಜುನಾಥರನ್ನು ಪ್ರಭಾರವಾಗಿ ಆಡಳಿತಾತ್ಮಕ ಮುಖ್ಯಶಿಕ್ಷರಾಗಿ ಕಾರ್ಯನಿರ್ವಹಿಸುವ ವ್ಯವಸ್ಥೆ ಮಾಡಿಕೊಟ್ಟರು. ಇದಕ್ಕೆ ಸ್ಪಂದಿಸಿದ ಗ್ರಾಮಸ್ಥರು ಪ್ರತಿಭಟನೆ ಕೈಬಿಟ್ಟರು.
ಶಿಕ್ಷಣ ಸಂಯೋಜಕ ಪರಮೇಶ್ವರ್, CRP ವಿ.ಡಿ.ನಾಗರಾಜ್, ಶಿಕ್ಷಣ ಇಲಾಖೆಯ ವಿವಿಧ ಅಧಿಕಾರಿಗಳು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಿವೇಕಾನಂದ ಎಂ.ಜಿ, ಉಪಾಧ್ಯಕ್ಷೆ ವೀಣಾ, ಕವಿತಾ ಪರಮೇಶ್ವರ, ನಂದಿನಿ ರಾಘವೇಂದ್ರ, ಶಿವಕುಮಾರ್, ಪಲ್ಲವಿ ರಮೇಶ್, ಭಾಸ್ಕರ್, ಜಗದೀಶ್, ಗಗನ್, ಹರೀಶ್, ಹೃತಿಕ್ ಗೌಡ, ಪ್ರಮುಖರಾದ ಉಳ್ಳಾಗದ್ದೆ ದೇವೇಂದ್ರಗೌಡ, ಕುಮಾರ ಹಿಲ್ಕುಂಜಿ ಇತರರು ಭಾಗವಹಿಸಿದ್ದರು