
ಶಿವಮೊಗ್ಗ : ಭದ್ರಾವತಿ ತಾಲೂಕು ಗುಮಡಘಟ್ಟ ಗ್ರಾಮದ ಪುಟ್ಟೆಗೌಡ ಎಂಬುವವರ ಮನೆಗೆ ಅಡಿಕೆ ಸುಲಿಯುವ ಕೆಲಸಕ್ಕಾಗಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಗ್ರಾಮದ ಶ್ರೀಮತಿ ರೂಪ ಗೋಪಾಲ ಎಂಬುವವರ ಮಗಳು ಐಶ್ವರ್ಯ ಎಂಬ ಯುವತಿಯು ದಿ: 20/08/2022 ರಿಂದ ಕಾಣೆಯಾಗಿರುತ್ತಾರೆ.
ಸದಾಶಿವಪುರ ಗ್ರಾಮದ ಹಕ್ಕಿಪಿಕ್ಕಿ ಕ್ಯಾಂಪ್ ವಾಸಿ ಮಹಮದ್ ಆಲಿ ಎಂಬುವವರ ಪತ್ನಿ ಶಬ್ಬು ಎಂಬ 35 ವರ್ಷದ ಮಹಿಳೆಯು ಮನೆಯಿಂದ ಹೊರಗೆ ಹೋಗಿದ್ದು, ವಾಪಾಸ್ಸಾಗಿರುವುದಿಲ್ಲ. ಈ ಮಹಿಳೆಯು 5.6 ಅಡಿ ಎತ್ತರ, ಗೋಧಿ ಮೈಬಣ್ಣ, ದುಂಡು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಉರ್ದು ಮತ್ತು ಕನ್ನಡ ಭಾಷೆ ಮಾತನಾಡುತ್ತಾರೆ.
ಭದ್ರಾವತಿ ತಾಲೂಕಿನ ಅರಬಿಳಚಿ ವಡ್ಡರಹಟ್ಟಿ ಗ್ರಾಮದ ಈಶ್ವರ ಬಿನ್ ನರಸಿಂಹಪ್ಪ ಎಂಬುವವರ ಅತ್ತೆ ಲಕ್ಷ್ಮೀದೇವಿ ಎಂಬ ಮಹಿಳೆ ಮಗಳನ್ನು ನೋಡಿಕೊಂಡು ತಮ್ಮ ಸ್ವಗ್ರಾಮಕ್ಕೆ ವಾಪಾಸ್ಸು ಹೊರಟವರು, ಊರಿಗೆ ಹೋಗದೇ ಕಾಣೆಯಾಗಿರುತ್ತಾರೆ.
ಈ ಮೂರು ಮಹಿಳೆಯನ್ನು ಕಂಡಲ್ಲಿ ಹೊಳೆಹೊನ್ನೂರು ಪೊಲೀಸ್ ಠಾಣೆಯ ದೂ.ಸಂ.: 08282-235494/ 9480803359 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.