
-
ಬ್ರಹ್ಮೇಶ್ವರ ರಸ್ತೆಯ ನೂತನ ಸೇತುವೆ ಕಾಮಗಾರಿ | ಸಂಸದ ಬಿವೈಆರ್ ಶಾಸಕ ಬೇಳೂರು ಶಂಕುಸ್ಥಾಪನೆ
ಹೊಸನಗರ: ತಾಲೂಕಿನ ಬಾಳೆಹಳ್ಳಿಯಿಂದ ಎಸ್ ಹೆಚ್ 77 – ಬ್ರಹ್ಮೇಶ್ವರ ರಸ್ತೆಯ ನೂತನ ಸೇತುವೆ ಕಾಮಗಾರಿಯನ್ನು ಸಂಸದ ಬಿ.ವೈ.ರಾಘವೇಂದ್ರ, ಸಾಗರ ಹೊಸನಗರ ಕ್ಷೇತ್ರದ ಶಾಸಕರಾದ ಗೋಪಾಲಕೃಷ್ಣ ಬೇಳೂರು ನೆರವೇರಿಸಿದರು.
ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಿಂದ ರೂ.319.46 ಲಕ್ಷ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಕ್ಷೇತ್ರದ ಕಟ್ಟಕಡೆ ಗ್ರಾಮಗಳಿಗೆ ರಸ್ತೆ ನಿರ್ಮಾಣ ಮಾಡುವಲ್ಲಿ ಕೇಂದ್ರದ ಗ್ರಾಮ ಸಡಕ್ ಯೋಜನೆ ಮಹತ್ವದ್ದಾಗಿದೆ. ಈ ಸಂದರ್ಭದಲ್ಲಿ ಹಿಂದೆ ಪ್ರಧಾನಮಂತ್ರಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ನೆನಪಾಗುತ್ತಾರೆ ಎಂದರು.
ಸಂಸದರಿಗೆ ಚಪ್ಪಾಳೆ ಕೊಡಿ: ಬೇಳೂರು
ಸಾಗರ ಹೊಸನಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಈ ಭಾಗಕ್ಕೆ ರಸ್ತೆ ಕಾಮಗಾರಿಗೆ ಅನುದಾನ ತಂದಿದ್ದಾರೆ ಅವರಿಗೆ ಒಂದು ಚಪ್ಪಾಳೆ ಕೊಡಿ ಎಂದು ಗಮನ ಸೆಳೆದರು.
ರಾಜಕಾರಣ ಬೇರೆ ಅಭಿವೃದ್ಧಿ ಬೇರೆ ಈ ಕಾಮಗಾರಿ ಉದ್ಘಾಟನೆ ಸಂದರ್ಭದಲ್ಲಿ ನಾನೇ ಸಂಸದರ ಡೇಟ್ ತೆಗೆದುಕೊಳ್ಳಿ. ಅಂದೇ ನಾನು ಬರುತ್ತೇನೆ ಎಂದಿದ್ದೆ ಎಂದರು.
ಗ್ಯಾರಂಟಿ ಯೋಜನೆಯಲ್ಲಿ ಅಲ್ಪಸ್ವಲ್ಪ ವ್ಯತ್ಯಯ ಆಗಿರಬಹುದು ಆದರೆ ಶೇ.90 ರಷ್ಟು ಬಡವರ, ಮಧ್ಯಮವರ್ಗದವರಿಗೆ ತಲುಪಿದೆ ಎಂದರು.
ಶಾಸಕರಾದ ಆರಗ ಜ್ಞಾನೇಂದ್ರ, ಗ್ರಾಮಪಂಚಾಯ್ತಿ ಮಾಲತಿ, ಕಲಗೋಡು ರತ್ನಾಕರ್, ಬಿ.ಯುವರಾಜ್, ಎರಗಿ ಉಮೇಶ್, ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಕರುಣಾಕರ, ಎರಗಿ ಗಣೇಶ್, ವಿವಿಧ ಇಲಾಖೆಯ ಅಧಿಕಾರಿಗಳು ಜನಪ್ರತಿನಿಧಿಗಳು, ಗ್ರಾಪಂ ಸದಸ್ಯರು ಇದ್ದರು.