
ಚಕ್ರಾ ಸಾವೇಹಕ್ಲು ಜಲಾಶಯಗಳಿಗೆ ಪ್ರಥಮ ಬಾಗಿನ :
ಇಕೋ ಟೂರಿಸಂ ಮಾಡಲು ಸೂಕ್ತ ಸ್ಥಳ: ಆರಗ ಜ್ಞಾನೇಂದ್ರ
ಹೊಸನಗರ: ಚಕ್ರಾ ಸಾವೇಹಕ್ಲು ಜಲಾಶಯಗಳು ನಾಡಿನ ಬೆಳಕಿಗಾಗಿ ಬಹುದೊಡ್ಡ ಕೊಡುಗೆ ನೀಡಿದೆ ಮಾತ್ರವಲ್ಲ ಇಕೋ ಟೂರಿಸಂಗೆ ಸೂಕ್ತ ಪ್ರದೇಶ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಬುಧವಾರ ಚಕ್ರಾ ಸಾವೇಹಕ್ಲು ಎರಡು ಜಲಾಶಯಗಳಿಗೆ ತೆರಳಿ ಪ್ರಥಮ ಬಾಗಿನ ಸಮರ್ಪಿಸಿದ ಬಳಿಕ ಮಾತನಾಡಿದರು.
ಈ ಅವಳಿ ಜಲಾಶಯ ಪ್ರದೇಶಗಳು ಪ್ರವಾಸೋಧ್ಯಮಕ್ಕೆ ಹೇಳಿ ಮಾಡಿಸಿದ ಜಾಗ. ಜನರು ಜಾಗವನ್ನು ಆಸ್ವಾಧಿಸಲು ಅವಕಾಶ ಮಾಡಿಕೊಡಬೇಕಿದೆ. ಅದರಲ್ಲು ನೀರು ತುಂಬಿ ಸುಭೀಕ್ಷೆ ಹೊರಸೂಸುವ ಹೊತ್ತಲ್ಲಿ ಈ ಪ್ರದೇಶ ಎಲ್ಲರ ಕಣ್ಮನ ಸೆಳೆಯುತ್ತದೆ. ಇದರ ಸಂರಕ್ಷಣೆ ಜೊತೆಗೆ ಅಭಿವೃದ್ಧಿ ಕೂಡ ಅಗತ್ಯವಾಗಿದೆ ಎಂದರು.
ಈ ಜಲಾಶಯಕ್ಕೆ ಹೋಗಲು ಮಾಸ್ತಿಕಟ್ಟೆಯಿಂದ ಪಾಸ್ ತರಬೇಕಿದೆ. ಸ್ಥಳೀಯವಾಗಿಯೇ ಪಾಸ್ ನೀಡಿದರೇ ಜನರಿಗೆ ಅನುಕೂಲವಾಗುತ್ತದೆ. ಕರಿಮನೆ ಗ್ರಾಪಂಯಲ್ಲಿ ಪಾಸ್ ಕೊಡುವ ವ್ಯವಸ್ಥೆ ಮಾಡುವ ಸಂಬಂಧ ಕೆಪಿಸಿ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ ಎಂದರು.
ಶಾಪವೂ ಹೌದು ವರವೂ ಹೌದು:
ಮಾಜಿ ಸಚಿವ ಹರತಾಳು ಹಾಲಪ್ಪ, ಜಲಾಶಯ ಪ್ರದೇಶ ಅದ್ಭುತವಾಗಿದೆ. ಎಲ್ಲೆಲ್ಲೂ ನೀರು ಕಾಣುತ್ತಿದೆ. ಮಲೆನಾಡಿಗೆ ಈ ನೀರು ಶಾಪವೂ ಹೌದು..ಆದರೆ ದೇಶದ ಪ್ರಾಕೃತಿಕ ಸಂಪನ್ಮೂಲದ ದೃಷ್ಟಿಯಿಂದ ವರವೂ ಹೌದು. ಸುಂದರವಾದ ಪ್ರದೇಶ. ಇದು ಸದಾ ಲವಲವಿಕೆಯಿಂದ ಇರಬೇಕು. ಇದನ್ನು ಬಳಸಿಕೊಂಡು ಪ್ರವಾಸೋಧ್ಯಮ ಜೊತೆಗೆ ಉದ್ಯೋಗ ಸೃಷ್ಟಿ ಆಗುವಂತ ಯೋಜನೆಗಳು ರೂಪಿಸಬೇಕಾಗಿದೆ ಎಂದರು.
ಶಿವಮೊಗ್ಗ ಶಾಸಕ ಚೆನ್ನಬಸಪ್ಪ, ಹುಡುಗನಾಗಿದ್ದಾಗ ಅನೇಕ ಬಾರಿ ಜಲಾಶಯಕ್ಕೆ ಬಂದಿದ್ದೇನೆ. ಅದ್ಭುತ ಪ್ರವಾಸಿ ತಾಣ ಇದಾಗಿದೆ. ಪ್ರಕೃತಿಯೊಂದಿಗೆ ಬದುಕಿ ಪ್ರಕೃತಿಯನ್ನು ಆರಾಧಿಸಬೇಕು. ಪ್ರವಾಸಿ ಸ್ಥಳವಾಗಿ ಆಧ್ಯತೆ ನೀಡಬೇಕಿದೆ.
ಎಂಎಲ್ಸಿ ರವಿಕುಮಾರ್, ಎಂಎಲ್ಸಿ ಡಾ.ಧನಂಜಯ ಸರ್ಜಿ ಮಾತನಾಡಿದರು ಮಾತ್ರವಲ್ಲದೇ ಜಲಾಶಯಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.
ತಹಶೀಲ್ದಾರ್ ರಶ್ಮೀ ಹಾಲೇಶ್, ವಾರಾಹಿ ಯೋಜನೆ ಕಾಮಗಾರಿ ವಿಭಾಗದ ಪ್ರಭಾರ ಅಧೀಕ್ಷಕ ಎಂಜಿನಿಯರ್ ಪ್ರಕಾಶ ಬ್ರಹ್ಮಾವರ್, ವಿದ್ಯುತ್ ವಿಭಾಗದ ಅಧೀಕ್ಷಕ ಎಂಜಿನಿಯರ್ ಮಹೇಶ್ ಬಿ.ಸಿ, ಕಾಮಗಾರಿ ವಿಭಾಗದ ಎಇಇ ಸುದೀಪ್, ಭದ್ರತಾ ಅಧಿಕಾರಿ ಸದಾಶಿವ, ಕರಿಮನೆ ಗ್ರಾಪಂ ಉಪಾಧ್ಯಕ್ಷ ರಮೇಶ ಹಲಸಿನಹಳ್ಳಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್, ಪ್ರಮುಖರಾದ ಕೆ.ವಿ.ಸುಬ್ರಹ್ಮಣ್ಯ, ಎನ್.ವೈ.ಸುರೇಶ್, ಹಾಲಗದ್ದೆ ಉಮೇಶ್, ಕೆ.ವಿ.ಕೃಷ್ಣಮೂರ್ತಿ, ಬಂಕ್ರಿಬೀಡು ಮಂಜುನಾಥ್, ರಾಜೇಶ ಹಿರಿಮನೆ, ಮೋಹನ ಮಂಡಾನಿ, ನಿತಿನ್, ವಿವಿಧ ಇಲಾಖೆ ಅಧಿಕಾರಿಗಳು, ಸ್ಥಳೀಯ ಪ್ರಮುಖರು ಹಾಜರಿದ್ದರು.