ದಂತ ವೈದ್ಯಕೀಯದಲ್ಲಿ ಚಿನ್ನದ ಪದಕ ಸಾಧನೆ ಮಾಡಿದ ಡಾ.ಸುಮನ್ ಜೆ | ಫ್ರಾನ್ಸ್ ಫೀಚರ್ಡ್ ಅವಾರ್ಡ್ ಪಡೆದ ಕಾರಣಗಿರಿ ಕುವರ

ದಂತ ವೈದ್ಯಕೀಯದಲ್ಲಿ 6 ಚಿನ್ನದ ಪದಕ ಸಾಧನೆ ಮಾಡಿದ ಡಾ.ಸುಮನ್ ಜೆ | ಫ್ರಾನ್ಸ್ ಫೀಚರ್ಡ್ ಅವಾರ್ಡ್ ಪಡೆದ ಕಾರಣಗಿರಿ ಕುವರ

ಹೊಸನಗರ: ಸರ್ಕಾರಿ ವಿಕ್ಟೋರಿಯ ದಂತ ವೈದ್ಯಕೀಯ ಕಾಲೇಜಿನ ಅಂತಿಮ ವರ್ಷದ ವ್ಯಾಸಾಂಗದಲ್ಲಿ ಎಲ್ಲಾ ಆರು ವಿಷಯಗಳಲ್ಲಿ ಚಿನ್ನದ ಪದಕ ಪಡೆಯುವ ಮೂಲಕ ಡಾ.ಸುಮನ್ ಜೆ ಕಾಲೇಜ್ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

ಪ್ರಾನ್ಸ್ ಅಕಾಡೆಮಿಯಿಂದ ಅತ್ಯುತ್ತಮ ದಂತ ವಿದ್ಯಾರ್ಥಿಯಾಗಿ ಪೆರ್ರಿ ಫೀಚರ್ಡ್ ಪುರಸ್ಕಾರ ಪಡೆದಿರುವ ಡಾ.ಸುಮನ್ ಜೆ ಹೊಸನಗರ ತಾಲೂಕಿನ ಕಾರಣಗಿರಿ ನಿವಾಸಿ ರತ್ನಾ ಮತ್ತು ಜಯರಾಮ್ ಇವರ ಪುತ್ರರಾಗಿದ್ದಾರೆ.

ಕುಟುಂಬದಲ್ಲಿ ಮನೆಮಾಡಿದ ಹರ್ಷ:

ಬೆಂಗಳೂರಿನ ಸರ್ಕಾರಿ ವಿಕ್ಟೋರಿಯಾ ಆಸ್ಪತ್ರೆಯ ದಂತ ವೈದ್ಯಕೀಯ ವ್ಯಾಸಂಗದಲ್ಲಿ 2019 ರಿಂದ 2024 ರ ವರೆಗೆ ಉತ್ತಮ ವಿದ್ಯಾರ್ಥಿ ಅವಾರ್ಡ್ ಪಡೆದಿರುವ ಡಾ.ಸುಮನ್ ಜೆ ಕಾಲೇಜಿನ ಹೆಮ್ಮೆಗೆ ಪಾತ್ರರಾಗಿದ್ದಾರೆ. ಡಾ.ಸುಮನ್ ಸಾಧನೆ ತಂದೆ ಕಾರಣಗಿರಿ ಜಯರಾಂ, ತಾಯಿ ರತ್ನ, ಸಹೋದರ ಸುಜನ್ ಹರ್ಷ ತಂದಿದ್ದು ಮನೆಯಲ್ಲಿ ಸಂಭ್ರಮ ಮನೆಮಾಡಿದೆ.

Exit mobile version