
-
ಏಳುಮಕ್ಕಳ ಚೌಡಿಯ ಸನ್ನಿಧಿಯಲ್ಲಿ ಸಂಭ್ರಮದ ದೀಪೋತ್ಸವ | ಗಮನ ಸೆಳೆದ ದೀಪಾಲಂಕಾರ, ರಂಗೋಲಿ
ಹೊಸನಗರ: ಇತಿಹಾಸ ಪ್ರಸಿದ್ಧ ಹಿರೇಮಠದಲ್ಲಿರುವ ಏಳು ಮಕ್ಕಳ ಚೌಡಿ ಸನ್ನಿಧಿಯಲ್ಲಿ ದೀಪೋತ್ಸವ ಸಂಭ್ರಮದಲ್ಲಿ ನೆರವೇರಿತು.
ಅರ್ಚಕ ಸುಬ್ರಹ್ಮಣ್ಯ ನಾವಡ ಪೌರೋಹಿತ್ಯದಲ್ಲಿ ದೀಪಾರಾಧನೆ ವಿವಿಧ ಅರ್ಚನೆಯ ವಿಶೇಷದೊಂದಿಗೆ ಜರುಗಿತು.
ಗಮನ ಸೆಳೆದ ದೀಪಾಲಂಕಾರ:
ಕಳೆದ ಏಳೆಂಟು ವರ್ಷದಿಂದ ವಿಶೇಷ ಮಹತ್ವ ಪಡೆದಿರುವ ಏಳುಮಕ್ಕಳ ಚೌಡಿಯ ದೀಪೋತ್ಸವ ಈ ಬಾರಿ ಕೂಡ ವಿಜೃಂಭಣೆಯಿಂದ ನೆರವೇರಿತು.
ಹಿರೇಮಠ ಮುಖ್ಯ ರಸ್ತೆಯಿಂದ ದೇವಿ ಸನ್ನಿಧಿವರೆಗೆ ವಿಶೇಷ ದೀಪಾಲಂಕಾರ, ಸಿಡಿಮದ್ದು ಪ್ರದರ್ಶನ, ಆಕರ್ಷಕ ರಂಗೋಲಿ, ವಿಶೇಷ ಪ್ರಸಾದ ವಿನಿಯೋಗ, ಪಾಲ್ಗೊಂಡ ಭಕ್ತ ಸಮೂಹ ಗಮನ ಸೆಳೆಯಿತು.
ಸ್ಥಳೀಯರಾದ ಸುಬ್ರಹ್ಮಣ್ಯ ಭಾಗವತ್, ನಾರಾಯಣ ಕಾಮತ್, ಕರುಣಾಕರಶೆಟ್ಟಿ, ಕುಮಾರ ಹಿಲ್ಕುಂಜಿ, ನಾಗರಾಜ ಭಂಡಾರಿ, ಅಣ್ಣಪ್ಪ, ಸುಧಾಕರ ಪೂಜಾರಿ, ನಾಗರಾಜ ಶೇಟ್, ಕಾರ್ತಿಕ್, ಕಾರ್ತಿಕ, ಕಿಟ್ಟಿ ಮಾಮ್, ಶಿವಶಂಕರ್ ಮಠ್, ಶ್ರೀಕರ್, ಪ್ರದೀಪ್ ಶೆಟ್ಟಿ, ಪ್ರಭಾಕರ ಶೆಟ್ಟಿ, ಶ್ರೀಧರ ದುಬಾರ ತಟ್ಟಿ, ಮಹಿಳೆಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.