ಊರ ಹಬ್ಬವಾದ ಸರ್ಕಾರಿ ಶಾಲಾ ಬೆಳ್ಳಿಹಬ್ಬ | ಗೃಹ ಸಚಿವ ಆರಗರಿಂದ ರವಿ ಬಿದನೂರುರಿಗೆ ಸನ್ಮಾನ

ಹೊಸನಗರ: ಸರ್ಕಾರಿ ಪ್ರೌಢಶಾಲೆಯ ಬೆಳ್ಳಿಹಬ್ಬವನ್ನು ಆಧುನಿಕತೆಯ ಸ್ಪರ್ಷದೊಂದಿಗೆ, ವಿಶೇಷ ವಿನ್ಯಾಸದಲ್ಲಿ ರೂಪಿಸಿ ಊರಿನ ಹಬ್ಬವಾಗಿ ಪರಿವರ್ತಿಸಿದ ರಜತ ಮಹೋತ್ಸವ ಸಮಿತಿ ಅಧ್ಯಕ್ಷರಾದ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರವಿ ಬಿದನೂರು ಇವರನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಸನ್ಮಾನಿಸಿ ಗೌರವಿಸಿದರು.

ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸರ್ಕಾರಿ ಶಾಲಾ ಸಂಭ್ರಮವನ್ನು ಊರಿನ ಸಂಭ್ರಮವಾಗಿ ರೂಪಿಸಿದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾರೋಪದಲ್ಲಿ ಸರ್ಕಾರಿ ಪ್ರೌಢಶಾಲೆಯ ಆರಂಭದಲ್ಲಿ ಸಹಕರಿಸಿದ ಸರ್ವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಪ್ರಮುಖರಾದ ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಸುರೇಶ ಸ್ವಾಮಿರಾವ್, ಕೆ.ವಿ.ಕೃಷ್ಣಮೂರ್ತಿ, ಸುಮ ಸುಬ್ರಹ್ಮಣ್ಯ, ಕರುಣಾಕರ ಶೆಟ್ಟಿ, ಆದಿರಾಜ ಬಂಗಾರಿ, ಹೆಚ್.ವೈ.ಸತೀಶ್, ಶಾರದಮ್ಮ, ಗೀತಾ ಚಂದ್ರಶೇಖರ್, ಚೇತನ್ ಕುಮಾರಭಟ್, ಮಧುಕರಶೆಟ್ಟಿ, ಶೈಲಜಾ ಪಾಂಡುರಂಗ ಮುಖ್ಯಶಿಕ್ಷಕ ಡಾ.ಸುಧಾಕರ್ ಉಪಸ್ಥಿತರಿದ್ದರು.
ಅಶ್ವಿನಿ ಪಂಡಿತ್ ಮತ್ತು ಅರವಿಂದ್ ಕಾರ್ಯನಿರೂಪಿಸಿದರು.

Exit mobile version