ಹೊಸನಗರ ಆಶ್ರಯ ಬಡಾವಣೆ ರಸ್ತೆಗೆ ಪಪಂ RI ಮಂಜುನಾಥ ಭೇಟಿ | ಹದಗೆಟ್ಟ ರಸ್ತೆ ಅವಸ್ಥೆ ಪರಿಶೀಲನೆ
[ಹೊಸನಗರ ಆಶ್ರಯ ಬಡಾವಣೆ ರಸ್ತೆ ಪರಿಶೀಲಿಸುತ್ತಿರುವ ಪಪಂ RI ಮಂಜುನಾಥ್ ]
ಹೊಸನಗರ: ವಿಪರೀತ ಮಳೆ, ಮರಳು ಲಾರಿಗಳ ಹಗಲುರಾತ್ರಿ ಸಂಚಾರದ ಕಾರಣ ಕೆಸರುಗದ್ದೆಯಂತಾಗಿರುವ ಹಳೇ ಸಾಗರ ರಸ್ತೆಯಿಂದ ಆಶ್ರಯ ಬಡಾವಣೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಪಟ್ಟಣ ಪಂಚಾಯ್ತಿ ಅಧಿಕಾರಿ RI ಮಂಜುನಾಥ ಭೇಟಿ ಮಾಡಿ ಪರಿಶೀಲಿಸಿದರು.
ಮುಖ್ಯಾಧಿಕಾರಿ ಸುರೇಶ್ ಸೂಚನೆಯಂತೆ ಭೇಟಿ ನೀಡಿದ್ದು, ರಸ್ತೆ ಅವ್ಯವಸ್ಥೆ ಕುರಿತಂತೆ ಅವರಿಗೆ ಮಾಹಿತಿ ನೀಡಲಾಗುವುದು ಎಂದಿದ್ದಾರೆ.
ಪಪಂ ಸಿಬ್ಬಂದಿ ಲಕ್ಷ್ಮಣ್ ಜೊತೆಗಿದ್ದರು.