ಮರಳು ಲಾರಿಗಳ ಎಡೆಬಿಡದೇ ಸಂಚಾರ | ಕೆಸರುಗದ್ದೆಯಾದ ಆಶ್ರಯ ಮನೆಗೆ ಸಾಗುವ ರಸ್ತೆ | ಆಶ್ರಯಮನೆ ಬಡಾವಣೆ ನಿವಾಸಿಗಳ ಆರೋಪ
ಹೊಸನಗರ: ಒಂದೆಡೆ ವಿಪರೀತ ಮಳೆ, ಮತ್ತೊಂದೆಡೆ.. ಹಗಲಿರುಳು ಎನ್ನದೇ ಸಂಚರಿಸುವ ಮರಳು ಲಾರಿಗಳಿಂದಾಗಿ ಆಶ್ರಮನೆಗಳಿಗೆ ಸಾಗುವ ರಸ್ತೆ ಸಂಪೂರ್ಣ ಕೆಸರುಗದ್ದೆಯಾಗಿ ಮಾರ್ಪಾಡಾಗಿದೆ.
ಹೌದು ಪಟ್ಟಣದ ಹಳೇ ಸಾಗರ ರಸ್ತೆಯ ಸಮೀಪ ಆಶ್ರಯ ಮನೆಗಳ ಕಾಲನಿಗೆ ಸಂಪರ್ಕಿಸುವ ರಸ್ತೆಯ ದುಸ್ಥಿತಿ. ನಡೆದು ಹೋಗಲು ಕೂಡ ಆಗದ ಸ್ಥಿತಿ ನಿರ್ಮಾಣವಾದರೂ ಕೇಳುವವರು ಇಲ್ಲವಾಗಿದೆ ಸ್ಥಳೀಯರು ಆರೋಪಿಸಿದ್ದಾರೆ.
ಬೇಸಿಗೆಯಲ್ಲಿ ದಾಸ್ತಾನು ಮಾಡಿದ ಮರಳನ್ನು ಈಗ ರಾತ್ರಿ ಹಗಲೆನ್ನದೇ ಸಾಗಿಸುತ್ತಿದ್ದು ರಸ್ತೆ ಹೊಂಡಗುಂಡಿಗಳಿಂದ ತುಂಬಿ ಹೋಗಿದೆ. ಶಾಲಾ ಕಾಲೇಜು ಮಕ್ಕಳು ಕೂಡ ಇದೇ ಮಾರ್ಗದಲ್ಲಿ ಓಡಾಡುವುದು ಅನಿವಾರ್ಯವಾಗಿದೆ.
ಹತ್ತಾರು ಮನೆಗಳಿರುವ ಈ ಭಾಗದ ಸಂಪರ್ಕ ರಸ್ತೆಯ ಸಮಸ್ಯೆ ನೀಗಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ರಾಜೇಶ್, ಸತೀಶ್, ನಿಸಾರ್, ರೇಖಾ ಗಣೇಶ್, ಆನಂದ, ಕಟ್ಟೆ ರಾಘು ಒತ್ತಾಯಿಸಿದ್ದಾರೆ.
ರಸ್ತೆಯಲ್ಲಿ ಸಿಲುಕಿದ ಕಾರನ್ನು ಎತ್ತಲು ಹರಸಾಹಸ ಪಡುತ್ತಿರುವುದು.