
- HOSANAGARA | ಶಾಸಕರ ಕಚೇರಿಯಲ್ಲಿ ಅಹವಾಲು ಸ್ವೀಕರಿಸಿದ ಶಾಸಕ ಬೇಳೂರು:
ಸೂಕ್ತ ಜಾಗ ತೋರಿಸಲು ಬೀದಿ ಬದಿ ವ್ಯಾಪಾರಿಗಳ ಮನವಿ
ಹೊಸನಗರ: ಸೂಕ್ತ ಜಾಗವಿಲ್ಲದೇ ವ್ಯಾಪಾರ ನಡೆಸಲು ಸಾಧ್ಯವಾಗುತ್ತಿಲ್ಲ. ಶೀಘ್ರ ಸೂಕ್ತ ಜಾಗ ಗುರುತಿಸಿಕೊಡುವಂತೆ ಬೀದಿ ಬದಿ ವ್ಯಾಪಾರಸ್ಥರು ಶಾಸಕ ಬೇಳೂರು ಗೋಪಾಲಕೃಷ್ಣರಿಗೆ ಮನವಿ ಸಲ್ಲಿಸಿದರು.
ಹೆದ್ದಾರಿ ಬದಿಯಲ್ಲಿ ವ್ಯಾಪಾರ ವಹಿವಾಟು ನಡೆಸಿಕೊಂಡು ಬದುಕು ಕಟ್ಟಿಕೊಂಡಿದ್ದೆವು. ಆದರೆ ಹೆದ್ದಾರಿ ಬದಿಯಲ್ಲಿದ್ದ ನಮ್ಮ ಅಂಗಡಿ ಮುಗ್ಗಟ್ಟುಗಳನ್ನು ಖುಲ್ಲಾ ಮಾಡಿದ್ದು, ಬದುಕು ಬೀದಿಗೆ ಬಂದಿದೆ. ಕೂಡಲೇ ಸೂಕ್ತ ಜಾಗ ಗುರುತಿಸಿಕೊಡುವ ಮೂಲಕ ನಮ್ಮ ಬದುಕು ನೀಡುವಂತೆ ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಶಾಸಕರು ಈ ಬಗ್ಗೆ ಅಧಿಕಾರಿಗಳ ಜೊತೆ ಮಾತನಾಡಿ ಶೀಘ್ರವಾಗಿ ನಿಮ್ಮ ಸಮಸ್ಯೆ ನೀಗಿಸುವ ಭರವಸೆ ನೀಡಿದರು.


ಬೀದಿ ವ್ಯಾಪಾರಿಗಳಾದ ಚಂದ್ರಶೇಖರ್, ಗಣಪತಿ, ಲಕ್ಷ್ಮಣ್, ಶಾಲಿನಿ, ಅವಿನಾಶ್, ಗೋವಿಂದಣ್ಣ ಇತರರು ಉಪಸ್ಥಿತರಿದ್ದರು.
