HOSANAGARA | ಶಾಸಕರ ಕಚೇರಿಯಲ್ಲಿ ಅಹವಾಲು ಸ್ವೀಕರಿಸಿದ ಶಾಸಕ ಬೇಳೂರು: ಸೂಕ್ತ ಜಾಗ ತೋರಿಸಲು ಬೀದಿ ಬದಿ ವ್ಯಾಪಾರಿಗಳ ಮನವಿ

ಹೆದ್ದಾರಿ ಬದಿಯಲ್ಲಿ ವ್ಯಾಪಾರ ವಹಿವಾಟು ನಡೆಸಿಕೊಂಡು ಬದುಕು ಕಟ್ಟಿಕೊಂಡಿದ್ದೆವು. ಆದರೆ ಹೆದ್ದಾರಿ ಬದಿಯಲ್ಲಿದ್ದ ನಮ್ಮ ಅಂಗಡಿ ಮುಗ್ಗಟ್ಟುಗಳನ್ನು ಖುಲ್ಲಾ ಮಾಡಿದ್ದು, ಬದುಕು ಬೀದಿಗೆ ಬಂದಿದೆ. ಕೂಡಲೇ ಸೂಕ್ತ ಜಾಗ ಗುರುತಿಸಿಕೊಡುವ ಮೂಲಕ ನಮ್ಮ ಬದುಕು ನೀಡುವಂತೆ ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ಶಾಸಕರು ಈ ಬಗ್ಗೆ ಅಧಿಕಾರಿಗಳ ಜೊತೆ ಮಾತನಾಡಿ ಶೀಘ್ರವಾಗಿ ನಿಮ್ಮ ಸಮಸ್ಯೆ ನೀಗಿಸುವ ಭರವಸೆ ನೀಡಿದರು.

ಬೀದಿ ವ್ಯಾಪಾರಿಗಳಾದ ಚಂದ್ರಶೇಖರ್, ಗಣಪತಿ, ಲಕ್ಷ್ಮಣ್, ಶಾಲಿನಿ, ಅವಿನಾಶ್, ಗೋವಿಂದಣ್ಣ ಇತರರು ಉಪಸ್ಥಿತರಿದ್ದರು.

 

Exit mobile version